BRICS Presidency: 2026ರ ಬ್ರಿಕ್ಸ್ ಅಧ್ಯಕ್ಷತೆ ಬಗ್ಗೆ ಮೋದಿ ಸರ್ಕಾರದಿಂದ ದೊಡ್ಡ ಯೋಜನೆ: ಬ್ರ್ಯಾಂಡ್ ಇಮೇಜ್ ನಿರ್ಮಾಣಕ್ಕೆ ಪ್ಲಾನ್!
ನವದೆಹಲಿ: ಜನವರಿ 1, 2026ರಿಂದ ಭಾರತ ಬ್ರಿಕ್ಸ್ (BRICS) ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದು, ನರೇಂದ್ರ ಮೋದಿ ಸರ್ಕಾರ (Narendra Modi Government) ಇದನ್ನು ದೇಶದ ಬಲವಾದ ಬ್ರ್ಯಾಂಡ್ ಇಮೇಜ್ (Brand Image) ನಿರ್ಮಾಣಕ್ಕೆ ಬಳಸಿಕೊಳ್ಳುವ ಮಹತ್ವಾಕಾಂಕ್ಷಿ ಯೋಜನೆ ರೂಪಿಸಿದೆ. CNN-News18 ಪಡೆದ ದಾಖಲೆಯ ಪ್ರಕಾರ, ಎಲ್ಲಾ 28 ರಾಜ್ಯಗಳು ಮತ್ತು 9 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 60 ನಗರಗಳನ್ನು ಒಳಗೊಂಡಂತೆ ಬ್ರಿಕ್ಸ್ ಸಭೆಗಳು ನಡೆಯಲಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬ್ರಿಕ್ಸ್ ಅನ್ನು "ಯುಎಸ್ ಡಾಲರ್ ಮೇಲಿನ ದಾಳಿ" ಎಂದಿದ್ದಾರೆ ಮತ್ತು ಸದಸ್ಯ ರಾಷ್ಟ್ರಗಳ ವಿರುದ್ಧ ಸುಂಕಗಳನ್ನು ಸಮರ್ಥಿಸಿದ್ದಾರೆ.