ಕೆಂಪು ಕೋಟೆ ಬ್ಲಾಸ್ಟ್ ಶಂಕಿತ, ಡಾ.ಉಮರ್‌ನ ಮೊದಲ ಫೋಟೋ ಲಭ್ಯ
ನವದೆಹಲಿ (ನ.11): ಸೋಮವಾರ ರಾತ್ರಿ ಕೆಂಪು ಕೋಟೆ ಬಳಿ ಸ್ಫೋಟ ಸಂಭವಿಸಿ 9 ಮಂದಿ ಸಾವು ಕಂಡಿದ್ದು, 24 ಮಂದಿ ಗಾಯಗೊಂಡಿದ್ದಾರೆ. ಈ ನಡುವೆ ಸ್ಫೋಟಗೊಂಡ ಹುಂಡೈ ಐ20 ಕಾರನ್ನು ಶಂಕಿತನೇ ಚಲಾಯಿಸುತ್ತಿರುವುದನ್ನು ತೋರಿಸುವ ಮೊದಲ ಚಿತ್ರ ಹೊರಬಿದ್ದಿದೆ. ಮೂಲಗಳ ಪ್ರಕಾರ, ಫರಿದಾಬಾದ್ ಭಯೋತ್ಪಾದಕ ಘಟಕದ ಶಂಕಿತ ಭಯೋತ್ಪಾದಕ ಮೊಹಮ್ಮದ್ ಉಮರ್, ಫರಿದಾಬಾದ್‌ನ ಅಲ್ ಫಲಾಹ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ.