MI vs RR ಹೈ-ವೋಲ್ಟೇಜ್ ಕದನ; ಮುಂಬೈಗಿಂತ ರಾಜಸ್ಥಾನ್ ಹೇಗೆ ಸ್ಟ್ರಾಂಗ್ ಆಗಿದೆ?
ಐಪಿಎಲ್ ಸೀಸನ್-19ರಲ್ಲಿ ಇಂದು ಮತ್ತೊಂದು ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಕ್ರಿಕೆಟ್ ಲೋಕದ ಎರಡು ಬಲಿಷ್ಠ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗುತ್ತಿವೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಹಣಾಹಣಿಯಲ್ಲಿ ಗೆದ್ದು ಪ್ಲೇ-ಆಫ್ ಹಾದಿಯನ್ನು ಸುಗಮಗೊಳಿಸಿಕೊಳ್ಳಲು ರಾಜಸ್ಥಾನ್ ರಾಯಲ್ಸ್ ಸಜ್ಜಾಗಿದೆ. ಮುಂಬೈಗೆ ಇದು ತವರಿನ ಪಂದ್ಯವಾದರೂ, ಇಂದಿನ ಕದನದಲ್ಲಿ ರಾಜಸ್ಥಾನವೇ ಗೆಲ್ಲುವ ಫೇವರಿಟ್ ಎನ್ನಲಾಗುತ್ತಿದೆ. ಅದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ.
ವೈಭವ್-ಯಶಸ್ವಿ ಜೋಡಿಯ ಸ್ಪೋಟಕ ಆರಂಭ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆರಂಭಿಕ ಆಟಗಾರರೇ ದೊಡ್ಡ ಶಕ್ತಿ. ಯುವ ಆಟಗಾರ ವೈಭವ್ ಸೂರ್ಯವಂಶಿ ಮತ್ತು ಅನುಭವಿ ಯಶಸ್ವಿ ಜೈಸ್ವಾಲ್ ಎದುರಾಳಿ ಬೌಲರ್‌ಗಳನ್ನು ಚಿಂದಿ ಉಡಾಯಿಸುತ್ತಿದ್ದಾರೆ. ಪವರ್‌ಪ್ಲೇನಲ್ಲಿ ಯಾವುದೇ ಭಯವಿಲ್ಲದೆ ಬ್ಯಾಟ್ ಬೀಸುತ್ತಿರುವ ಈ ಜೋಡಿ, ತಂಡಕ್ಕೆ ಭರ್ಜರಿ ಅಡಿಪಾಯ ಹಾಕಿಕೊಡುತ್ತಿದೆ. ಇಂದು ಕೂಡ ಈ ಜೋಡಿ ಕ್ಲಿಕ್ ಆದರೆ ಮುಂಬೈ ಬೌಲರ್‌ಗಳಿಗೆ ಸಂಕಷ್ಟ ತಪ್ಪಿದ್ದಲ್ಲ. ನಂಬರ್ 3 ಸ್ಲಾಟ್‌ನಲ್ಲಿ ಧೃವ್ ಜುರೆಲ್ ಮಿಂಚು ಈ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಮ್ಯಾನೇಜ್‌ಮೆಂಟ್ ಮಾಡಿದ ಒಂದು ಅದ್ಭುತ ಪ್ರಯೋಗವೆಂದರೆ ಧೃವ್ ಜುರೆಲ್‌ರನ್ನು ನಂಬರ್ 3 ಸ್ಥಾನಕ್ಕೆ ಪ್ರಮೋಟ್ ಮಾಡಿದ್ದು. ಜುರೆಲ್ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಒತ್ತಡದ ಸಂದರ್ಭದಲ್ಲಿ ಮೌರಿಟಿ ಮೆರೆಯುತ್ತಿರುವ ಅವರು, ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.