ವಾಷಿಂಗ್ಟನ್: ನಾನು ಗಗನಯಾತ್ರಿಗಳನ್ನು ಮರಳಿ ತರುವ ಆಫರ್ ನೀಡಿದ್ದೆ. ಆದರೆ ಜೋ ಬೈಡನ್ (Joe Biden) ಸರ್ಕಾರ ಈ ಆಫರ್ ಅನ್ನು ರಾಜಕೀಯ ಕಾರಣಕ್ಕೆ ತಿರಸ್ಕರಿಸಿತ್ತು ಎಂದು ಸ್ಪೇಸ್ ಎಕ್ಸ್ (SpaceX) ಸಂಸ್ಥಾಪಕ ಎಲೋನ್ ಮಸ್ಕ್ (Elon Musk) ಹೇಳಿದ್ದಾರೆ.ಮಾಧ್ಯಮದ ಜೊತೆ ಮಾತನಾಡಿದ ಅವರು, ಗಗನಯಾತ್ರಿಗಳು ಕೇವಲ ಎಂಟು ದಿನಗಳವರೆಗೆ ಮಾತ್ರ ಇರಬೇಕಿತ್ತು. ಆದರೆ ಸುಮಾರು 10 ತಿಂಗಳಿನಿಂದ ಅಲ್ಲಿದ್ದರು. ಸ್ಪೇಸ್‌ಎಕ್ಸ್ ಗಗನಯಾನಿಗಳನ್ನು ಕರೆತರುವ ಬಗ್ಗೆ ಬೈಡನ್ ಆಡಳಿತಕ್ಕೆ ಪ್ರಸ್ತಾಪ ಸಲ್ಲಿಸಿತ್ತು. ಆದರೆ ರಾಜಕೀಯ ಕಾರಣಗಳಿಗಾಗಿ ಇದನ್ನು ತಿರಸ್ಕರಿಸಲಾಗಿತ್ತು ಎಂದು ತಿಳಿಸಿದರು.ಇಂದು ಭೂಮಿಗೆ ಮರಳಿದ ಬುಚ್ ವಿಲ್ಮೋರ್ ಅವರು ಬಾಹ್ಯಾಕಾಶದಲ್ಲಿ ಇದ್ದಾಗ ಈ ಪ್ರಶ್ನೆಯನ್ನು ಕೇಳಲಾಗಿತ್ತು. ಎಲೋನ್ ಮಸ್ಕ್ ಅವರು ನಿಮ್ಮನ್ನು ಮೊದಲೇ ಮರಳಿ ಕರೆತರುವ ಪ್ರಸ್ತಾಪವನ್ನು ನೀಡಿದ್ದಾಗಿ ಹೇಳಿದ್ದಾರೆ ಮತ್ತು ಅದನ್ನು ನಿರಾಕರಿಸಲಾಗಿದೆ ಇದು ನಿಜವೇ ಎಂದು ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ವಿಲ್ಮೋರ್ ಅವರು, ಮಸ್ಕ್ ಹೇಳುವುದು ಸಂಪೂರ್ಣವಾಗಿ ವಾಸ್ತವ. ಇಷ್ಟು ಮಾತ್ರ ಈಗ ನಾನು ಹೇಳಬಲ್ಲೆ ಎಂದಿದ್ದರು.
ಮಸ್ಕ್ ಆಫರ್ ತಿರಸ್ಕರಿಸಿದ್ದ ಬೈಡನ್ – ಬಾಹ್ಯಾಕಾಶದಲ್ಲೇ 9 ತಿಂಗಳು ಕಳೆದ ಸುನಿತಾ
Source : Smacy News
1 month ago