ಪಾಕಿಸ್ತಾನ: ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ದೇಗುಲ ಧ್ವಂಸ, 1 ಸೆರೆ
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿ ಮುಂದುವರಿದಿದ್ದು, ಸೋಮವಾರ ರಾತ್ರಿ ಸಿಂಧ್ ಪ್ರಾಂತ್ಯದ ನಗರ್ ಪಾರ್ಕರ್ ಪ್ರದೇಶದ ರಾಥಿ ಎಂಬ ಹಳ್ಳಿಯಲ್ಲಿದ್ದ ಹಳೆಯ ಮಾತಾ ಜೋಗ್ ಮಾಯಾ ದೇವಾಲಯವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.
ಮಂಗಳವಾರದಂದು ದೇವಸ್ಥಾನದ ಸಿಬ್ಬಂದಿ ದೇವಾಲಯದ ಬಳಿಗೆ ಹೋದಾಗ ಅಲ್ಲಿ ಕೇವಲ ಅವಶೇಷಗಳು ಮಾತ್ರ ಇದ್ದವು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಓರ್ವ ಶಂಕಿತನನ್ನು ಬಂಧಿಸಿದ್ದಾರೆ. ಆ.21ರಂದು ಪಾಕಿಸ್ತಾನದ ನರೋವಾಲ್ ಜಿಲ್ಲೆಯಲ್ಲಿ 125 ವರ್ಷ ಹಳೆಯ ಹಿಂದೂ ದೇಗುಲವನ್ನು ರಾತ್ರೋರಾತ್ರಿ ಧ್ವಂಸಗೊಳಿಸಲಾಗಿತ್ತು.