South India's No.1 Digital Mobile Paper
LIVE
Welcome to Smacy Media

42ರ ವಯಸ್ಸಿನಲ್ಲೂ 37 ಎಸೆತಗಳಲ್ಲಿ ಶತಕ ಸಿಡಿಸಿದ ಬ್ಯಾಟರ್ ಎಬಿ ಡಿ ವಿಲಿಯರ್ಸ್

42ರ ವಯಸ್ಸಿನಲ್ಲೂ 37 ಎಸೆತಗಳಲ್ಲಿ ಶತಕ ಸಿಡಿಸಿದ ಬ್ಯಾಟರ್ ಎಬಿ ಡಿ ವಿಲಿಯರ್ಸ್

ಶಾರ್ಜಾ: ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿ ಎಂಟು ವರ್ಷಗಳಿಗೂ ಹೆಚ್ಚು ಸಮಯ ಕಳೆದಿದ್ದರೂ, ತಮ್ಮ ಕೌಶಲ್ಯದಲ್ಲಿ ಕಿಂಚಿತ್ತೂ ಕುಸಿತವಾಗಿಲ್ಲ ಎಂಬುದನ್ನು ದಕ್ಷಿಣ ಆಫ್ರಿಕಾದ ದಿಗ್ಗಜ ಬ್ಯಾಟರ್ ಎಬಿ ಡಿ ವಿಲಿಯರ್ಸ್ (AB de Villiers) ಶುಕ್ರವಾರ (ಅ.10) ಸಾಬೀತುಪಡಿಸಿದರು. 'ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್' (WCL) ಟೂರ್ನಿಯಲ್ಲಿ 'ಸೌತ್ ಆಫ್ರಿಕಾ ಚಾಂಪಿಯನ್ಸ್' ತಂಡದ ಪರ ಆಡಿದ ಡಿ ವಿಲಿಯರ್ಸ್, ತಮ್ಮ ಹಳೆಯ ಲಯವನ್ನು ಮರುಕಳಿಸುವಂತೆ ಕೇವಲ 40 ಎಸೆತಗಳಲ್ಲಿ ಅಜೇಯ 111 ರನ್ ಸಿಡಿಸಿ, 'ಆಸ್ಟ್ರೇಲಿಯಾ ಚಾಂಪಿಯನ್ಸ್' ವಿರುದ್ಧ ತಮ್ಮ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.

ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ಚಾಂಪಿಯನ್ಸ್ ಐದು ವಿಕೆಟ್‌ ನಷ್ಟಕ್ಕೆ 209 ರನ್‌ ಮಾಡಿತ್ತು. ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್‌ ತಂಡವು 15.4 ಓವರ್‌ ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು ಜಯ ಸಾಧಿಸಿತು.

ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡಿ ವಿಲಿಯರ್ಸ್ ಆರು ಬೌಂಡರಿಗಳು ಮತ್ತು 11 ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದರು. ಇದರ ನೆರವಿನಿಂದ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡವು ಕೇವಲ 15.2 ಓವರ್‌ಗಳಲ್ಲಿ ಗುರಿಯನ್ನು ತಲುಪಿತು. ಅವರು ಕೇವಲ 37 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು.

ಎಬಿ ಡಿ ವಿಲಿಯರ್ಸ್ ತಮ್ಮ ಅತ್ಯಂತ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು; ಅವರು ಕವರ್, ಲಾಂಗ್-ಆಫ್, ಲಾಂಗ್-ಆನ್ ಮತ್ತು ಡೀಪ್ ಮಿಡ್-ವಿಕೆಟ್‌ನತ್ತ ಹಲವು ಬಾರಿ ಚೆಂಡನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ತಮ್ಮ ಹಳೇಯ ಆಟವನ್ನು ನೆನಪಿಸಿದರು.

📍 Chennai
📰 Udayavani
🕒 21 days ago

Related News

Today's Motivation
Today's Motivation
Daily Calender
Daily Calender
Today's Motivation
Today's Motivation
⬅ Back
➕ Post Ad
To Ads ➡