South India's No.1 Digital Mobile Paper
LIVE
Welcome to Smacy Media

ಪ್ರತಿಭಟನೆಗೆ ವಲಸೆಯೇ ಕಾರಣ: ಪ್ಯಾರಿಸ್ ಶೀಘ್ರದಲ್ಲೇ ಮುಸ್ಲಿಂ ನಗರವಾಗಲಿದೆ;ಟ್ರಂಪ್

ಪ್ರತಿಭಟನೆಗೆ ವಲಸೆಯೇ ಕಾರಣ: ಪ್ಯಾರಿಸ್ ಶೀಘ್ರದಲ್ಲೇ ಮುಸ್ಲಿಂ ನಗರವಾಗಲಿದೆ;ಟ್ರಂಪ್

ವಾಷಿಂಗ್ಟನ್: ಫ್ರಾನ್ಸ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳಿಗೆ ದೇಶದ ವಲಸೆ ನೀತಿಯೇ ಮುಖ್ಯ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ಮತ್ತು ಯುರೋಪ್ ದೇಶಗಳು ತಮ್ಮ ಗಡಿಗಳನ್ನು ತಕ್ಷಣವೇ ಬಿಗಿಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ವಾಷಿಂಗ್ಟನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ʼಫ್ರಾನ್ಸ್‌ನಲ್ಲಿ ಪ್ರಸ್ತುತ ಸಂಭವಿಸುತ್ತಿರುವ ಘಟನೆಗಳಿಗೆ ವಲಸೆಯೇ ಕಾರಣ ಹೊರತು ಶಿಕ್ಷಣ ಅಥವಾ ಇತರ ವಿಷಯಗಳಲ್ಲ. ಗಡಿಗಳನ್ನು ಮುಚ್ಚುವಂತೆ ನಾನು ಮ್ಯಾಕ್ರನ್ ಅವರಿಗೆ ತಿಳಿಸಿದ್ದೇನೆʼ ಎಂದಿದ್ದಾರೆ.
ಬೆಲೆ ಏರಿಕೆಯನ್ನು ಖಂಡಿಸಿ ಪ್ಯಾರಿಸ್ ಸೇರಿದಂತೆ ಫ್ರಾನ್ಸ್‌ನ ವಿವಿಧ ನಗರಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿದ್ದು, ಇದು ಹಿಂಸಾಚಾರಕ್ಕೆ ತಿರುಗಿದೆ.

📍 Chennai
📰 Prajavani
🕒 9 days ago

Related News

WPL Auction: ಮಹಿಳಾ ಪ್ರೀಮಿಯರ್ ಲೀಗ್; ಆರ್‌ಸಿಬಿಗೆ ನಾಲ್ವರು ಬಲಾಢ್ಯರ ಎಂಟ್ರಿ
WPL Auction: ಮಹಿಳಾ ಪ್ರೀಮಿಯರ್ ಲೀಗ್; ಆರ್‌ಸಿಬಿಗೆ ನಾಲ್ವರು ಬಲಾಢ್ಯರ ಎಂಟ್ರಿ
Today's Motivation
Today's Motivation
Daily Calender
Daily Calender
⬅ Back
➕ Post Ad
To Ads ➡