South India's No.1 Digital Mobile Paper
LIVE
Welcome to Smacy Media

ಚೀನಾ ಸೇನೆ ಗಸ್ತು ನಿಯಮ ಉಲ್ಲಂಘಿಸುತ್ತಿರುವುದೇ ಗಡಿ ಸಂಘರ್ಷಕ್ಕೆ ಕಾರಣ: MEA

ಚೀನಾ ಸೇನೆ ಗಸ್ತು ನಿಯಮ ಉಲ್ಲಂಘಿಸುತ್ತಿರುವುದೇ ಗಡಿ ಸಂಘರ್ಷಕ್ಕೆ ಕಾರಣ: MEA

ನವದೆಹಲಿ: ಚೀನಾ ಸೇನಾ ಸಿಬ್ಬಂದಿ ನಿಗದಿತ ಗಸ್ತು ಮಾರ್ಗವನ್ನು ಬಿಟ್ಟು ಬೇರೆಡೆ ಗಸ್ತು ತಿರುಗಿದಾಗಲೆಲ್ಲಾ ವಾಸ್ತವ ಗಡಿ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಪರಿಸ್ಥಿತಿ ಹದಗೆಡುತ್ತಿದೆ ಎಂದು ಭಾರತ ಶುಕ್ರವಾರ ಹೇಳಿದೆ.

ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ಎರಡೂ ದೇಶಗಳ ಬಾಂಧವ್ಯ ವೃದ್ಧಿಗೆ ಅತ್ಯಗತ್ಯ ಎಂದು ಸ್ಪಷ್ಟವಾಗಿ ತಿಳಿಸಿದೆ.

ಅರುಣಾಚಲ ಪ್ರದೇಶದುದ್ದಕ್ಕೂ ಇರುವ ಗಡಿಯ ಹಲವು ಕಡೆ ಕಳೆದ ಕೆಲವು ದಿನಗಳಲ್ಲಿ ಚೀನಾ ಸೈನಿಕರೊಂದಿಗೆ ಘರ್ಷಣೆಯಾಗಿದೆ ಮತ್ತು ಅದು ಮುಂದುವರಿದಿದೆ ಎಂದು ಇಂಡೋ–ಟಿಬೆಟಿಯನ್‌ ಗಡಿ ಪೊಲೀಸ್‌ (ಐಟಿಬಿಪಿ) ಮಹಾನಿರ್ದೇಶಕ ಶತ್ರುಜೀತ್‌ ಕಪೂರ್‌ ಅವರು ಇತ್ತೀಚೆಗೆ ಹೇಳಿದ್ದರು. ಅದಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸುವಾಗ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಈ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಅವರು, ‘ನಾವು ಹಿಂದೆಯೇ ಹೇಳಿರುವಂತೆ, ಚೀನಾ ಪಡೆಗಳು ಗಸ್ತು ತಿರುಗುವುದನ್ನು ನಿಗದಿತ ಮಾರ್ಗದಿಂದ ಬದಲಿಸಿದಾಗ, ಗಡಿ ಪ್ರದೇಶದಲ್ಲಿ ಪರಿಸ್ಥಿತಿ ಹದಗೆಡುತ್ತದೆ’ ಎಂದಿದ್ದಾರೆ.

‘ಎಲ್‌ಎಸಿ ಉದ್ದಕ್ಕೂ ಇರುವ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಎರಡೂ ದೇಶಗಳು ರಾಜತಾಂತ್ರಿಕ ಮಾರ್ಗ ಹಾಗೂ ಸದ್ಯ ಅಸ್ತಿತ್ವದಲ್ಲಿರುವ ಮಿಲಿಟರಿ ವ್ಯವಸ್ಥೆಗಳನ್ನು ಬಳಸುತ್ತಿವೆ’ ಎಂದೂ ಹೇಳಿದ್ದಾರೆ.

‘ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ದ್ವಿಪಕ್ಷೀಯ ಸಂಬಂಧಗಳ ಒಟ್ಟಾರೆ ಬೆಳವಣಿಗೆಗೆ ಅತ್ಯಂತ ಮಹತ್ವದ್ದು ಎಂಬುದನ್ನು ಒತ್ತಿಹೇಳಲು ಬಯಸುತ್ತೇನೆ’ ಎಂದಿದ್ದಾರೆ.

📍 Chennai
📰 Prajavani
🕒 5 days ago

Related News

MLC Polls: ಆರೆಸ್ಸೆಸ್ ಭದ್ರಕೋಟೆ ನಾಗಪುರದಲ್ಲಿ ಕಾಂಗ್ರೆಸ್‌ಗೆ ಜಯ, ಬಿಜೆಪಿಗೆ ಆಘಾತ
MLC Polls: ಆರೆಸ್ಸೆಸ್ ಭದ್ರಕೋಟೆ ನಾಗಪುರದಲ್ಲಿ ಕಾಂಗ್ರೆಸ್‌ಗೆ ಜಯ, ಬಿಜೆಪಿಗೆ ಆಘಾತ
WPL Auction: ಮಹಿಳಾ ಪ್ರೀಮಿಯರ್ ಲೀಗ್; ಆರ್‌ಸಿಬಿಗೆ ನಾಲ್ವರು ಬಲಾಢ್ಯರ ಎಂಟ್ರಿ
WPL Auction: ಮಹಿಳಾ ಪ್ರೀಮಿಯರ್ ಲೀಗ್; ಆರ್‌ಸಿಬಿಗೆ ನಾಲ್ವರು ಬಲಾಢ್ಯರ ಎಂಟ್ರಿ
Today's Motivation
Today's Motivation
⬅ Back
➕ Post Ad
To Ads ➡