South India's No.1 Digital Mobile Paper
LIVE
Welcome to Smacy Media

ಫ್ರೆಂಚ್ ಓಪನ್ ಬ್ಯಾಡ್ಮಿಂಟನ್: ಸಿಂಧು ರನ್ನರ್ ಅಪ್

ಫ್ರೆಂಚ್ ಓಪನ್ ಬ್ಯಾಡ್ಮಿಂಟನ್: ಸಿಂಧು ರನ್ನರ್ ಅಪ್

ಪ್ಯಾರಿಸ್: ಭಾರತದ ಪಿ.ವಿ. ಸಿಂಧು ಅವರು ಭಾನುವಾರ ಇಲ್ಲಿ ನಡೆದ ಫ್ರೆಂಚ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್‌ನಲ್ಲಿ ರನ್ನರ್ ಅಪ್ ಸ್ಥಾನ ಪಡೆದರು.

ಫೈನಲ್‌ನಲ್ಲಿ ಅವರು ದಕ್ಷಿಣ ಕೊರಿಯಾದ ಆ್ಯನ್ ಸೆ ಯಂಗ್ ಅವರ ಎದುರು ದಿಟ್ಟ ಹೋರಾಟ ನಡೆಸಿದರು. ಆದರೆ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಯಂಗ್ 16–21, 21–11, 21–12 ರಿಂದ ಸಿಂಧು ಅವರನ್ನು ಮಣಿಸಿದರು. ಒಲಿಂಪಿಕ್ ಚಾಂಪಿಯನ್ ಕೂಡ ಆಗಿರುವ ಯಂಗ್ ಅವರಿಗೆ ಇದು 11ನೇ ಫ್ರೆಂಚ್ ಓಪನ್ ಕಿರೀಟವಾಗಿದೆ.

ಫೈನಲ್ ಹಣಾಹಣಿಯಲ್ಲಿ ಸಿಂಧು ಅವರು ಬಿರುಸಿನ ಆರಂಭ ಮಾಡಿದರು. ಮೊದಲ ಗೇಮ್‌ನಲ್ಲಿ ದೊಡ್ಡ ಅಂತರದ ಜಯಸಾಧಿಸಿದರು. ಎರಡು ಒಲಿಂಪಿಕ್ಸ್‌ ಪದಕ ವಿಜೇತ ಆಟಗಾರ್ತಿ ಸಿಂಧು ಅವರ ಆತ್ಮವಿಶ್ವಾಸ ಹೆಚ್ಚಿತು. 20 ನಿಮಿಷ ನಡೆದ ಈ ಗೇಮ್‌ನ ಆರಂಭಿಕ ಹಂತವು ಸಮಬಲದಲ್ಲಿ ಸಾಗಿತ್ತು. ನೆಟ್ ಬಳಿಯ ತುರುಸಿನ ಆಟದಲ್ಲಿ 4–4 ರಿಂದ 7–7ರವರೆಗೂ ಹೋರಾಟ ನಡೆಯಿತು. ಓವರ್‌ಹೆಡ್ ಕ್ರಾಸ್‌ ಕೋರ್ಟ್‌ ಸ್ಮ್ಯಾಷ್ ಮೂಲಕ ಎರಡು ಅಂಕಗಳ ಮುನ್ನಡೆ ಸಾಧಿಸಿದರು. ಇದರೊಂದಿಗೆ ಪಟಪಟನೆ ಅಂಕ ಗಳಿಸುತ್ತ 15–11ರ ಅಂತರ ಸಾಧಿಸಿದರು. ಒಂದು ಲಾಂಗ್ ಶಾಟ್ ಮತ್ತೊಂದು ನೆಟ್‌ಗೆ ಶಟಲ್ ಹಾಕಿದ ಸಿಂಧು ಎರಡು ಅಂಕ ಕೊಟ್ಟರು. ಇದರಿಂದಾಗಿ ಕೊರಿಯಾದ ಆಟಗಾರ್ತಿ 13–15ಕ್ಕೆ ಸಾಗಿದರು. ನಂತರ ಪುಟಿದೆದ್ದ ಸಿಂಧು ಮುನ್ನಡೆ ಕಾಯ್ದುಕೊಂಡರು. ಕ್ರಾಸ್ ಕೋರ್ಟ್ ರಿಟರ್ನ್ ಮತ್ತು ಡ್ರಾಪ್ ಮೂಲಕ ಪಾಯಿಂಟ್‌ಗಳನ್ನು ಗಳಿಸಿದರು.

ಆದರೆ ನಂತರದ ಗೇಮ್‌ ಆರಂಭದಲ್ಲಿ 3–0 ಮುನ್ನಡೆ ಪಡೆದರು. 10 ಅಂಕಗಳವರೆಗೂ ಮುನ್ನಡೆಯು ಅತ್ತ, ಇತ್ತ ವಾಲಿತು. ಆದರೆ ನಂತರದ ಆಟದಲ್ಲಿ ಕೊರಿಯಾ ಆಟಗಾರ್ತಿ ಪಾರಮ್ಯ ಮೆರೆದರು. ಕೊನೆಯ ಮತ್ತು ನಿರ್ಣಾಯಕ ಗೇಮ್‌ನಲ್ಲಿಯೂ ಸಿಂಧು ದಿಟ್ಟ ಹೋರಾಟ ನಡೆಸಿದರು. ಒಂದು ಹಂತದಲ್ಲಿ 36 ಹೊಡೆತಗಳ ರ‍್ಯಾಲಿ ಕುತೂಹಲ ಕೆರಳಿಸಿತು. ಆದರೆ ಸಿಂಧು ಹೊಡೆದ ವೈಡ್‌ ಶಾಟ್‌ನಿಂದಾಗಿ ರ‍್ಯಾಲಿ ಅಂತ್ಯವಾಯಿತು. ಅಂಕವು ಯಂಗ್ ಖಾತೆ ಸೇರಿತು.

📍 Chennai
📰 Prajavani
🕒 4 days ago

Related News

Today's Motivation
Today's Motivation
Daily Calender
Daily Calender
WPL Auction: ಮಹಿಳಾ ಪ್ರೀಮಿಯರ್ ಲೀಗ್; ಆರ್‌ಸಿಬಿಗೆ ನಾಲ್ವರು ಬಲಾಢ್ಯರ ಎಂಟ್ರಿ
WPL Auction: ಮಹಿಳಾ ಪ್ರೀಮಿಯರ್ ಲೀಗ್; ಆರ್‌ಸಿಬಿಗೆ ನಾಲ್ವರು ಬಲಾಢ್ಯರ ಎಂಟ್ರಿ
⬅ Back
➕ Post Ad
To Ads ➡