South India's No.1 Digital Mobile Paper
LIVE
Welcome to Smacy Media

ಕ್ಯಾಪಿಟಲ್ ಕಟ್ಟಡ ಪ್ರವೇಶಿಸದಂತೆ ತಡೆಯಿರಿ: ಟ್ರಂಪ್ ಹೇಳಿಕೆಗೆ ಸಯೀದ್ ತಿರುಗೇಟು

ಕ್ಯಾಪಿಟಲ್ ಕಟ್ಟಡ ಪ್ರವೇಶಿಸದಂತೆ ತಡೆಯಿರಿ: ಟ್ರಂಪ್ ಹೇಳಿಕೆಗೆ ಸಯೀದ್ ತಿರುಗೇಟು

ವಾಷಿಂಗ್ಟನ್: ‘ಜಿಹಾದಿಯೊಬ್ಬ ಕ್ಯಾಪಿಟಲ್ ಕಟ್ಟಡ ಪ್ರವೇಶಿಸದಂತೆ ತಡೆಯಿರಿ’ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಡೆಮಾಕ್ರಟಿಕ್ ಅಭ್ಯರ್ಥಿ ಅಬ್ದುಲ್ ಸಯೀದ್ ತೀವ್ರವಾಗಿ ಖಂಡಿಸಿದ್ದಾರೆ.

‘ಅಧ್ಯಕ್ಷರು (ಟ್ರಂಪ್) ನನ್ನ ಹೆಸರಿನ ಬಗ್ಗೆ ವೈಯಕ್ತಿಕವಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ತಮ್ಮ ಅಳಿಯನ ಪ್ರೈವೇಟ್ ಈಕ್ವಿಟಿ ಕಂಪನಿಗೆ ಅನುದಾನ ನೀಡುವ ಸೌದಿಗಳ ಹೆಸರು ಅಥವಾ 400 ಮಿಲಿಯನ್ ಅಮೆರಿಕನ್‌ ಡಾಲರ್ ಮೌಲ್ಯದ ಪ್ರೈವೇಟ್ ಜೆಟ್ ನೀಡುವ ಕತಾರ್‌ ದೇಶದವರ ಹೆಸರು ‘ಸಯೀದ್’ ಆದಾಗ ಯಾವುದೇ ಅಭ್ಯಂತರ ಇರುವುದಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.

‘ಸಯೀದ್ ಹಿಂಸಾತ್ಮಕ ಭಯೋತ್ಪಾದಕ’ ಎಂಬ ಟ್ರಂಪ್ ಹೇಳಿಕೆಯನ್ನು ಬೆಂಬಲಿಸದೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಮೈಕ್ ರೋಜರ್ಸ್ ಅಂತರ ಕಾಯ್ದುಕೊಂಡಿದ್ದಾರೆ

‘ನಾನು ಅವರನ್ನು (ಸಯೀದ್) ಎಂದಿಗೂ ಭಯೋತ್ಪಾದಕ ಎಂದು ಕರೆದಿಲ್ಲ’ ಎಂದು ರೋಜರ್ಸ್ ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದರೂ, ಸಯೀದ್‌ಗೆ ಮುಸ್ಲಿಂ ಬ್ರದರ್‌ಹುಡ್ ಸಂಘಟನೆಯೊಂದಿಗೆ ಸಂಪರ್ಕವಿದೆ ಎಂದು ಆರೋಪಿಸಿದ್ದರು. ಆದರೆ, ಸಯೀದ್. ಮುಸ್ಲಿಂ ಬ್ರದರ್‌ಹುಡ್ ಜೊತೆಗಿನ ನಂಟನ್ನು ನಿರಾಕರಿಸಿದ್ದಾರೆ.
ಮಿಚಿಗನ್‌ನ ಪೋರ್ಟ್ ಹುರಾನ್‌ನಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಟ್ರಂಪ್, ‘ಜಿಹಾದಿ ಮತ್ತು ಮುಸ್ಲಿಂ ಬ್ರದರ್‌ಹುಡ್’ ಸಂಘಟನೆಯ ಸದಸ್ಯರೊಬ್ಬರು (ಅಬ್ದುಲ್ ಎಲ್-ಸಯೀದ್) ಅಮೆರಿಕದ ಸೆನೆಟರ್ ಆಗುವುದನ್ನು ತಡೆಯಲು ನಾನು ಬಂದಿದ್ದೇನೆ’ ಎಂದು ಹೇಳಿದ್ದರು.

ಅಬ್ದುಲ್ ಚುನಾವಣೆಯಲ್ಲಿ ಗೆದ್ದರೆ, ಅಮೆರಿಕನ್ ಸೆನೆಟ್‌ಗೆ ಆಯ್ಕೆಯಾದ ಮೊದಲ ಮುಸ್ಲಿಂ ಎನಿಸಿಕೊಳ್ಳಲಿದ್ದಾರೆ. ಸಯೀದ್ ಅವರನ್ನು ಅಮೆರಿಕ ವಿರೋಧಿ ಮುಸ್ಲಿಂ ತೀವ್ರವಾದಿ ಎಂದು ಕರೆದಿರುವ ಟ್ರಂಪ್, 2001ರ ಸೆಪ್ಟೆಂಬರ್ 11ರ ದಾಳಿಯ ಸಮಯದಲ್ಲಿ ವಿಮಾನದಲ್ಲಿದ್ದ ಭಯೋತ್ಪಾದಕರಿಗೆ ಸಯೀದ್ ಅವರನ್ನು ಹೋಲಿಸುವ ಮೂಲಕ ವಾಗ್ದಾಳಿ ನಡೆಸಿದ್ದರು.

‘ಡೆಮಾಕ್ರಟಿಕ್ ಅಭ್ಯರ್ಥಿ (ಅಬ್ದುಲ್ ಸಯೀದ್) ವಿರುದ್ಧ ಮತ ಚಲಾಯಿಸುವುದು, ವಿಮಾನವೊಂದರಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿದ ಮಿಚಿಗನ್ ಮೂಲದ ಟಾಡ್ ಬೀಮರ್ ಮತ್ತು ಇತರರು ತೋರಿದ ಧೈರ್ಯಕ್ಕೆ ಸಮಾನವಾಗಿರುತ್ತದೆ’ ಎಂದು ಟ್ರಂಪ್ ಹೇಳಿದ್ದರು.

‘ಇಪ್ಪತ್ತೈದು ವರ್ಷಗಳ ಬಳಿಕ ಟಾಡ್ ಬೀಮರ್ ಮಾಡಿದಂತೆಯೇ, ಜಿಹಾದಿಯೊಬ್ಬ ಕ್ಯಾಪಿಟಲ್ (ಸಂಸತ್ ಭವನ) ಒಳಗೆ ಪ್ರವೇಶಿಸುವುದನ್ನು ತಡೆಯಲು ಮಿಚಿಗನ್ ಎದ್ದು ನಿಂತು ಹೋರಾಡಬೇಕಿದೆ’ ಎಂದು ಟ್ರಂಪ್ ಕರೆ ನೀಡಿದ್ದರು.

ಒಂದು ವೇಳೆ ಸಯೀದ್ ಗೆದ್ದರೆ, ಸೆನೆಟ್ ಒಳಗೆ ಪ್ರವೇಶಿಸುವ ಮೊದಲು ಮೆಟಲ್ ಡಿಟೆಕ್ಟರ್ ಮೂಲಕ ಹಾದುಹೋಗಬೇಕಾದ ಏಕೈಕ ಸೆನೆಟರ್ ಅವರಾಗುತ್ತಾರೆ ಎಂದು ಟ್ರಂಪ್ ಲೇವಡಿ ಮಾಡಿದ್ದರು.

ನವೆಂಬರ್ 3ರಂದು ಅಮೆರಿಕದ ಮಧ್ಯಂತರ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಿಚಿಗನ್ ರಾಜ್ಯವು ದೇಶದಲ್ಲೇ ಅತ್ಯಂತ ತೀವ್ರ ಪೈಪೋಟಿಯಿಂದ ಕೂಡಿದೆ. ಸಯೀದ್ ಅವರು ರಿಪಬ್ಲಿಕನ್ ಅಭ್ಯರ್ಥಿ ಮೈಕ್ ರೋಜರ್ಸ್ ವಿರುದ್ಧ ಕಠಿಣ ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ.

📍 Chennai
📰 Prajavani
🕒 3 days ago

Related News

ದೀಪಾವಳಿ ಸಂದರ್ಭದಲ್ಲೇ ಹೆಚ್ಚಳವಾಗಲಿದೆ ಹಾಲಿನ ದರ: ಜನತೆಗೆ ಶಾಕ್‌ ಕೊಟ್ಟ ಸರ್ಕಾರ
ದೀಪಾವಳಿ ಸಂದರ್ಭದಲ್ಲೇ ಹೆಚ್ಚಳವಾಗಲಿದೆ ಹಾಲಿನ ದರ: ಜನತೆಗೆ ಶಾಕ್‌ ಕೊಟ್ಟ ಸರ್ಕಾರ
Today's Motivation
Today's Motivation
Daily Calender
Daily Calender
⬅ Back
➕ Post Ad
To Ads ➡