South India's No.1 Digital Mobile Paper
LIVE
Welcome to Smacy Media

ಕೇಂದ್ರ ಸರ್ಕಾರಿ ನೌಕರರಿಗೆ ಶೇ 3ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಸಚಿವ ಸಂಪುಟ ಅನುಮೋದನೆ

ಕೇಂದ್ರ ಸರ್ಕಾರಿ ನೌಕರರಿಗೆ ಶೇ 3ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಸಚಿವ ಸಂಪುಟ ಅನುಮೋದನೆ

ನವದೆಹಲಿ: ದೀಪಾವಳಿ ಹಬ್ಬದ ಸನ್ನಿಹದಲ್ಲೇ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಕೇಂದ್ರ ಸಚಿವ ಸಂಪುಟವು ಸಿಹಿ ಸುದ್ದಿ ನೀಡಿದ್ದು, ಶೇಕಡಾ 3 ರಷ್ಟು ತುಟ್ಟಿಭತ್ಯೆ (DA) ಹಾಗೂ ತುಟ್ಟಿ ಪರಿಹಾರ (DR) ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಈ ನಿರ್ಧಾರದಿಂದ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68 ಲಕ್ಷ ಪಿಂಚಣಿದಾರರು ನೇರ ಪ್ರಯೋಜನ ಪಡೆಯಲಿದ್ದಾರೆ.

ಈ ಹೆಚ್ಚಳದೊಂದಿಗೆ ನೌಕರರ ಮೂಲ ವೇತನ ಮತ್ತು ಪಿಂಚಣಿದಾರರ ಮೂಲ ಪಿಂಚಣಿಯ ಮೇಲಿನ ಡಿಎ ಹಾಗೂ ಡಿಆರ್ ಪ್ರಮಾಣವು ಶೇಕಡಾ 60 ರಿಂದ ಶೇಕಡಾ 63 ಕ್ಕೆ ಏರಿಕೆಯಾಗಲಿದೆ. ಸರ್ಕಾರದ ಈ ನಿರ್ಧಾರದಿಂದ ಬೊಕ್ಕಸಕ್ಕೆ ಒಟ್ಟು 10,016 ಕೋಟಿ ರೂಪಾಯಿ ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ.

ಹೆಚ್ಚುತ್ತಿರುವ ಬೆಲೆ ಏರಿಕೆಯ ಭರವನ್ನು ತಗ್ಗಿಸಲು ಹಬ್ಬದ ಸಂದರ್ಭದಲ್ಲಿ ಈ ಭತ್ಯೆಯನ್ನು ಹೆಚ್ಚಿಸಲಾಗಿದೆ. ಸೇವೆಯಲ್ಲಿರುವ ನೌಕರರಿಗೆ ತುಟ್ಟಿಭತ್ಯೆ (DA) ಸಿಕ್ಕರೆ, ನಿವೃತ್ತ ಪಿಂಚಣಿದಾರರಿಗೆ ತುಟ್ಟಿ ಪರಿಹಾರ (DR) ದೊರೆಯುತ್ತದೆ.

ಡಿಎ ಶೇ 60 ರಿಂದ ಶೇ 63ಕ್ಕೆ ಏರಿಕೆ
ಸಾಮಾನ್ಯವಾಗಿ ಜೀವನ ವೆಚ್ಚದ ಬದಲಾವಣೆಗೆ ಅನುಗುಣವಾಗಿ ಸರ್ಕಾರವು ವರ್ಷಕ್ಕೆ ಎರಡು ಬಾರಿ (ಜನವರಿ 1 ಮತ್ತು ಜುಲೈ 1 ರಿಂದ ಅನ್ವಯವಾಗುವಂತೆ) ತುಟ್ಟಿಭತ್ಯೆಯನ್ನು ಪರಿಷ್ಕರಿಸುತ್ತದೆ. ಪ್ರಸ್ತುತ ನೀಡಲಾಗಿರುವ ಈ ಹೆಚ್ಚಳವು 2026ರ ಜುಲೈ ಕಂತಿಗೆ ಸಂಬಂಧಿಸಿದುದಾಗಿದ್ದು, ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಜುಲೈ ತಿಂಗಳಿನಿಂದ ಅನ್ವಯವಾಗುವಂತೆ ಹಿಂಬಾಕಿ (Arrears) ಕೂಡ ಸಿಗಲಿದೆ.

📍 Chennai
📰 Udayavani
🕒 5 hrs ago

Related News

WPL Auction: ಮಹಿಳಾ ಪ್ರೀಮಿಯರ್ ಲೀಗ್; ಆರ್‌ಸಿಬಿಗೆ ನಾಲ್ವರು ಬಲಾಢ್ಯರ ಎಂಟ್ರಿ
WPL Auction: ಮಹಿಳಾ ಪ್ರೀಮಿಯರ್ ಲೀಗ್; ಆರ್‌ಸಿಬಿಗೆ ನಾಲ್ವರು ಬಲಾಢ್ಯರ ಎಂಟ್ರಿ
Today's Motivation
Today's Motivation
Daily Calender
Daily Calender
⬅ Back
➕ Post Ad
To Ads ➡