South India's No.1 Digital Mobile Paper
LIVE
Welcome to Smacy Media

ಮನೆ ಬಾಗಿಲಿಗೆ ಜನನ, ಮರಣ ಪ್ರಮಾಣಪತ್ರ: ಮಹಾನಗರ ಪಾಲಿಕೆ – ಅಂಚೆ ಇಲಾಖೆ ಒಪ್ಪಂದ

ಮನೆ ಬಾಗಿಲಿಗೆ ಜನನ, ಮರಣ ಪ್ರಮಾಣಪತ್ರ: ಮಹಾನಗರ ಪಾಲಿಕೆ – ಅಂಚೆ ಇಲಾಖೆ ಒಪ್ಪಂದ

ಮೈಸೂರು: ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಪಡೆಯಲು ಸಾರ್ವಜನಿಕರು ಪದೇ ಪದೇ ಕಚೇರಿಗಳಿಗೆ ಭೇಟಿ ನೀಡುವುದನ್ನು ತಪ್ಪಿಸುವ ಉದ್ದೇಶದಿಂದ, ಇಲ್ಲಿನ ಮಹಾನಗರ ಪಾಲಿಕೆಯು ಅಂಚೆ ಇಲಾಖೆ ಮೈಸೂರು ಅಂಚೆ ವಿಭಾಗದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಈ ವ್ಯವಸ್ಥೆಯಡಿ ಪಾಲಿಕೆಯಿಂದ ನೀಡಲಾಗುವ ಪ್ರಮಾಣಪತ್ರಗಳನ್ನು ಸಾರ್ವಜನಿಕರು ತಿಳಿಸುವ ವಿಳಾಸಕ್ಕೆ ಅಂಚೆ ಮೂಲಕ ತಲುಪಿಸಲಾಗುವುದು.

ಪಾಲಿಕೆಯ ಚಾಮರಾಜೇಂದ್ರ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಆಯುಕ್ತೆ ಎಂ.ಕೆ. ಸವಿತಾ ಮತ್ತು ಮೈಸೂರು ಅಂಚೆ ವಿಭಾಗದ ಹಿರಿಯ ಅಂಚೆ ಸೂಪರಿಂಟೆಂಡೆಂಟ್‌ ಜಿ. ಹರೀಶ್ ಒಪ್ಪಂದಕ್ಕೆ ಸಹಿ ಹಾಕಿದರು.

‘ಈ ಸೌಲಭ್ಯವು ಪಾಲಿಕೆಯ ಮುಖ್ಯ ಕಚೇರಿ ಹಾಗೂ ಎಲ್ಲಾ 9 ವಲಯ ಕಚೇರಿಗಳಲ್ಲೂ ದೊರೆಯುತ್ತದೆ. ಅಂಚೆ ಮೂಲಕ ಪಡೆಯಲು ಬಯಸುವವರು, ಜನನ ಅಥವಾ ಮರಣ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಒಪ್ಪಿಗೆ ಪತ್ರದೊಂದಿಗೆ ತಲುಪಿಸಬೇಕಾದ ಪೂರ್ಣ ವಿಳಾಸವನ್ನು ನೀಡಬೇಕು. ಸಿದ್ಧವಾದ ಪ್ರಮಾಣಪತ್ರವನ್ನು ಅಂಚೆ ಇಲಾಖೆಯ ವ್ಯಾಪಕ ಜಾಲದ ಮೂಲಕ ದೇಶದ ಯಾವುದೇ ಭಾಗದಲ್ಲಿರುವ ನಿಗದಿತ ವಿಳಾಸಕ್ಕೆ ತಲುಪಿಸಲಾಗುವುದು’ ಎಂದು ತಿಳಿಸಲಾಯಿತು.

‘ಕ್ಯಾಶ್‌ ಆನ್ ಡೆಲಿವರಿ (ಸಿಒಡಿ) ವ್ಯವಸ್ಥೆಯಡಿ, ಪ್ರಮಾಣಪತ್ರ ಸ್ವೀಕರಿಸುವ ವೇಳೆ ಸಾರ್ವಜನಿಕರು ₹100 ಅಂಚೆ ವಿತರಣಾ ಶುಲ್ಕವನ್ನು ಅಂಚೆ ಇಲಾಖೆಯ ಸಿಬ್ಬಂದಿಗೆ ಪಾವತಿಸಬೇಕು. ಈ ವ್ಯವಸ್ಥೆಯಿಂದ ಅರ್ಜಿ ಸಲ್ಲಿಸಿದ ನಂತರ ಪ್ರಮಾಣಪತ್ರವನ್ನು ಪಡೆದುಕೊಳ್ಳಲು ಸಾರ್ವಜನಿಕರು ಮತ್ತೊಮ್ಮೆ ಪಾಲಿಕೆ ಕಚೇರಿಗೆ ಭೇಟಿ ನೀಡುವ ಅಗತ್ಯ ತಪ್ಪಲಿದ್ದು, ಅವರ ಸಮಯ, ಪ್ರಯಾಣ ವೆಚ್ಚ ಹಾಗೂ ಶ್ರಮ ಉಳಿತಾಯ ಆಗಲಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸರ್ಕಾರಿ ಆಸ್ಪತ್ರೆಗಳು ಪಾಲಿಕೆಯ ಆಡಳಿತ ವ್ಯಾಪ್ತಿಗೆ ಒಳಪಡದಿರುವ ಕಾರಣದಿಂದ, ಸಂಬಂಧಿಸಿದ ಅಧಿಕಾರಿಗಳಿಗೂ ಒಪ್ಪಂದದ ಪ್ರಯೋಜನಗಳು ಹಾಗೂ ಕಾರ್ಯವಿಧಾನದ ಬಗ್ಗೆ ಮಾಹಿತಿ ನೀಡಲಾಯಿತು.

ಅಂಚೆ ಇಲಾಖೆಯ ಎಎಸ್‌ಎಪಿ ಮಣಿಕುಮಾರ್, ಮಾರುಕಟ್ಟೆ ಅಧಿಕಾರಿ ಸುರೇಶ್‌ಕುಮಾರ್, ಖಾಸಗಿ ಆಸ್ಪತ್ರೆಗಳ ಅಧ್ಯಕ್ಷ ಡಾ.ಚಂದ್ರಶೇಖರ್, ಪಾಲಿಕೆಯ ಕಾರ್ಯಪಾಲಕ ಎಂಜಿನಿಯರ್‌ ಮೃತ್ಯುಂಜಯ ಕೆ.ಎಸ್., ಸಹಾಯಕ ಸಾಂಖ್ಯಿಕ ಅಧಿಕಾರಿ ಶಂಕರ್, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಇದ್ದರು.

📍 Dharwad
📰 Prajavani
🕒 10 hrs ago

Related News

Today's Motivation
Today's Motivation
Daily Calender
Daily Calender
WPL Auction: ಮಹಿಳಾ ಪ್ರೀಮಿಯರ್ ಲೀಗ್; ಆರ್‌ಸಿಬಿಗೆ ನಾಲ್ವರು ಬಲಾಢ್ಯರ ಎಂಟ್ರಿ
WPL Auction: ಮಹಿಳಾ ಪ್ರೀಮಿಯರ್ ಲೀಗ್; ಆರ್‌ಸಿಬಿಗೆ ನಾಲ್ವರು ಬಲಾಢ್ಯರ ಎಂಟ್ರಿ
⬅ Back
➕ Post Ad
To Ads ➡