South India's No.1 Digital Mobile Paper
LIVE
Welcome to Smacy Media

Cyclone: ಅರ್ನಬ್ ಚಂಡಮಾರುತದ ಅಬ್ಬರಕ್ಕೆ ಆಂಧ್ರ ತತ್ತರ... 4,600 ಕೋಟಿ ನಷ್ಟ ಅಂದಾಜು

Cyclone: ಅರ್ನಬ್ ಚಂಡಮಾರುತದ ಅಬ್ಬರಕ್ಕೆ ಆಂಧ್ರ ತತ್ತರ... 4,600 ಕೋಟಿ ನಷ್ಟ ಅಂದಾಜು

ಆಂಧ್ರಪ್ರದೇಶ : 'ಅರ್ನಬ್' ಚಂಡಮಾರುತಕ್ಕೆ ತತ್ತರಿಸಿರುವ ಆಂಧ್ರಪ್ರದೇಶದ ಕೃಷ್ಣಾ, ಪಶ್ಚಿಮ ಗೋದಾವರಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಕೋನಸೀಮಾ ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಗುರುವಾರ ವೈಮಾನಿಕ ಹಾಗೂ ಭೌತಿಕ ಸಮೀಕ್ಷೆ ನಡೆಸಿದರು. ರಾಜ್ಯಾದ್ಯಂತ ಚಂಡಮಾರುತದ ಹೊಡೆತಕ್ಕೆ ಇದುವರೆಗೆ ಏಳು ಜನರು ಸಾವನ್ನಪ್ಪಿದ್ದಾರೆ.

ಅಮರಾವತಿಯಿಂದ ಕೋನಸೀಮಾ ಜಿಲ್ಲೆಯ ಕಟ್ರೇನಿಕೋನಾ ಮಂಡಲದ ಚೆಯ್ಯೇರು ಗ್ರಾಮಕ್ಕೆ ಪ್ರಯಾಣಿಸಿದ ಮುಖ್ಯಮಂತ್ರಿಗಳು, ಮಾರ್ಗಮಧ್ಯೆ ಜಲಾವೃತಗೊಂಡ ಭತ್ತದ ಗದ್ದೆಗಳು, ಹಾನಿಗೊಳಗಾದ ಬಾಳೆ ಮತ್ತು ತೆಂಗಿನ ತೋಟಗಳು ಹಾಗೂ ಹಾನಿಗೊಳಗಾದ ಮೀನು/ಸೀಗಡಿ ಸಾಕು ಕೊಳಗಳನ್ನು ವೈಮಾನಿಕ ಸಮೀಕ್ಷೆಯ ಮೂಲಕ ವೀಕ್ಷಿಸಿದರು.

ವೆಟ್ಲಪಾಲೆಂ ಗ್ರಾಮದಲ್ಲಿ ಕೃಷಿ ಭೂಮಿಗೆ ಖುದ್ದಾಗಿ ಭೇಟಿ ನೀಡಿದ ನಾಯ್ಡು, ಸಂಕಷ್ಟದಲ್ಲಿರುವ ರೈತರೊಂದಿಗೆ ಚರ್ಚಿಸಿದರು. ಇನ್ನು 15 ದಿನಗಳಲ್ಲಿ ಕೊಯ್ಲಿಗೆ ಬರಬೇಕಿದ್ದ ಭತ್ತದ ಬೆಳೆ ನೀರುಪಾಲಾಗಿದ್ದು, ಇಳುವರಿಯಲ್ಲಿ ಬಾರಿ ಕುಸಿತ ಉಂಟಾಗುವ ಭೀತಿಯನ್ನು ರೈತರು ತೋಡಿಕೊಂಡರು. ಈ ವೇಳೆ ಸಿಎಂ ಬೆಳೆ ವಿಮೆ ವಿವರ ಹಾಗೂ ಪರಿಹಾರ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ಪಡೆದರು.

📍 Davanagere
📰 Udayavani
🕒 10 hrs ago

Related News

Today's Motivation
Today's Motivation
Daily Calender
Daily Calender
MLC Polls: ಆರೆಸ್ಸೆಸ್ ಭದ್ರಕೋಟೆ ನಾಗಪುರದಲ್ಲಿ ಕಾಂಗ್ರೆಸ್‌ಗೆ ಜಯ, ಬಿಜೆಪಿಗೆ ಆಘಾತ
MLC Polls: ಆರೆಸ್ಸೆಸ್ ಭದ್ರಕೋಟೆ ನಾಗಪುರದಲ್ಲಿ ಕಾಂಗ್ರೆಸ್‌ಗೆ ಜಯ, ಬಿಜೆಪಿಗೆ ಆಘಾತ
⬅ Back
➕ Post Ad
To Ads ➡