ಜಾಗತಿಕ ತೈಲ ಪೂರೈಕೆಗೆ ತೊಡಕು: ಜಿ20 ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತ ಕಳವಳ
ವಾಷಿಂಗ್ಟನ್: ಇಂಧನ ನಿರ್ಬಂಧ ಹಾಗೂ ಪೂರೈಕೆ ಮಾರ್ಗಗಳಲ್ಲಿನ ಅಡೆತಡೆಯಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ತೀವ್ರವಾಗಿ ಟೀಕಿಸಿದ್ದಾರೆ.
ಇಂಧನ ವ್ಯಾಪಾರ ಮತ್ತು ಮೂಲಸೌಕರ್ಯಗಳ ಮೇಲಿನ ಉದ್ದೇಶಪೂರ್ವಕ ದಾಳಿಗಳು, ಬೆಲೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ರೂಪಿಸಿದ ಒಂದು ಲೆಕ್ಕಾಚಾರದ ತಂತ್ರವಾಗಿದೆ ಎಂದು ಅವರು ಹೇಳಿದ್ದಾರೆ.
ಅಟ್ಲಾಂಟಾದಲ್ಲಿ ನಡೆದ ಜಿ-20 ವಿದೇಶಾಂಗ ಸಚಿವರ ಸಭೆಯಲ್ಲಿ ಜೈಶಂಕರ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇರಾನ್ ತೈಲ ಮಾರಾಟದ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧ, ಪಶ್ಚಿಮ ಏಷ್ಯಾದಿಂದ ಇಂಧನ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯ ಹಾಗೂ ರಷ್ಯಾದ ಡೀಸೆಲ್ ಮಾರಾಟದ ಮೇಲಿನ ನಿರ್ಬಂಧ ತೆರವುಗೊಳಿಸುವ ನಿರ್ಧಾರದ ಹಿನ್ನೆಲೆಯಲ್ಲಿ ಈ ಹೇಳಿಕೆ ಬಂದಿದೆ.
ಜಗತ್ತು ಇಂಧನ ಉತ್ಪಾದನೆ ಬಿಕ್ಕಟ್ಟನ್ನು ಎದುರಿಸುತ್ತಿಲ್ಲ. ಬದಲಾಗಿ, ಸರಬರಾಜಿಗೆ ನಿರ್ಬಂಧ, ಅನಿಶ್ಚಿತತೆ, ಭರಿಸಲಾಗದ ಬೆಲೆ ಮತ್ತು ತೈಲ ಪಡೆಯುವವ ಸವಾಲುಗಳನ್ನು ಎದುರಿಸುತ್ತಿದೆ ಎಂದಿದ್ದಾರೆ.
ಇಂಧನ ಮಾರುಕಟ್ಟೆ ಮುಕ್ತವಾಗಿ ಇರಿಸಿಕೊಳ್ಳಲು ಜಿ20 ರಾಷ್ಟ್ರಗಳು ನಾಯಕತ್ವ ಪ್ರದರ್ಶಿಸಬೇಕು ಎಂದು ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಕರೆದಿದ್ದ ಸಭೆಯಲ್ಲಿ ಹೇಳಿದ್ದಾರೆ.
ಇಂಧನ ಪೂರೈಕೆಗೆ ಅಡೆತಡೆ, ನಿರ್ಬಂಧ ಮತ್ತು ನಿರ್ಬಂಧಗಳ ಮೂಲಕ ಇಂಧನ ಮಾರುಕಟ್ಟೆಯಲ್ಲಿ ನಿರಂತರ ಅನಿಶ್ಚಿತತೆ ತಲೆದೋರುತ್ತಿದೆ ಎಂದು ಅವರು ಹೇಳಿದ್ದಾರೆ. ಕಡಿಮೆ ಆದಾಯವಿರುವ ದೇಶಗಳು ಇದರಿಂದ ತೊಂದರೆ ಅನುಭವಿಸುತ್ತಿವೆ ಎಂದಿದ್ದಾರೆ.