ಮಹಿಳಾ ಏಕದಿನ ವಿಶ್ವಕಪ್: ಆಸ್ಟ್ರೇಲಿಯಾ ದಾಖಲೆ ರನ್ ಚೇಸ್! ಭಾರತಕ್ಕೆ ಮತ್ತೆ ನಿರಾಸೆ
ವಿಶಾಖಪಟ್ಟಣಂ: 7 ಬಾರಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ, ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ರನ್ ಚೇಸ್‌ನೊಂದಿಗೆ ಈ ಬಾರಿಯ ಏಕದಿನ ವಿಶ್ವಕಪ್‌ನಲ್ಲೂ ತಾನೇ ಗೆಲ್ಲುವ ಫೇವರಿಟ್ ಎನ್ನುವುದನ್ನು ತೋರಿದೆ. ಭಾರತ ವಿರುದ್ದ ಭಾನುವಾರ ಇಲ್ಲಿ ನಡೆದ ಪಂದ್ಯದಲ್ಲಿ 331 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ ಆಸ್ಟ್ರೇಲಿಯಾ 3 ವಿಕೆಟ್ ಜಯದೊಂದಿಗೆ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿತು. 4 ಪಂದ್ಯಗಳಿಂದ 7 ಅಂಕ ಗಳಿಸಿರುವ ಆಸೀಸ್, ಅಜೇಯವಾಗಿ ಉಳಿದಿದ್ದು ಸೆಮಿಫೈನಲ್‌ನತ್ತ ಮುನ್ನುಗ್ಗಿದೆ.