ಭಾರತದ ವಿರುದ್ಧ ಆಡುವುದನ್ನು ನಾವು ಇಷ್ಟಪಡುತ್ತೇವೆ: ಆಸೀಸ್ ನಾಯಕ ಮಿಚೆಲ್ ಮಾರ್ಷ್
ಸಿಡ್ನಿ: ಭಾರತದ ವಿರುದ್ಧ ಕ್ರಿಕೆಟ್ ಆಡುವುದನ್ನು ನಾವು ಇಷ್ಟಪಡುತ್ತೇವೆ ಎಂದು ಆಸ್ಟ್ರೇಲಿಯಾ ಟಿ–20 ತಂಡದ ನಾಯಕ ಮಿಚೆಲ್ ಮಾರ್ಷ್ ಹೇಳಿದ್ದಾರೆ
‘ಆಸ್ಟ್ರೇಲಿಯಾ ತಂಡವು ಮಾನಸಿಕವಾಗಿ ಆ್ಯಷಸ್ ಸರಣಿಗೆ ಸಿದ್ಧವಾಗುತ್ತಿದೆ. ಆದರೆ, ಭಾರತದ ವಿರುದ್ಧ ಆಡುವುದನ್ನು ನಾವೆಲ್ಲರೂ ಇಷ್ಟಪಡುತ್ತೇವೆ’ ಎಂದು ಹೇಳಿದ್ದಾರೆ.
ಕ್ರಿಕೆಟ್ ಅಂಗಳದಲ್ಲಿ ಭಾರತವು ನಮಗೆ ಅತ್ಯುತ್ತಮ ಪೈಪೋಟಿ ನೀಡುತ್ತಿದೆ. ಒಂದು ತಂಡವಾಗಿ ಬಲಾಢ್ಯವಾಗಿದೆ. ಆ್ಯಷಸ್ ಸರಣಿಗೂ ಮೊದಲು ಭಾರತದ ವಿರುದ್ಧ ಆಡುತ್ತಿರುವುದು, ಸರಿಯಾದ ಸಮಯವಾಗಿದೆ ಎಂದು ಅನಿಸುತ್ತಿದೆ ಎಂದಿದ್ದಾರೆ.