ನ್ಯೂಝಿಲೆಂಡ್ ತಂಡ ಪ್ರಕಟ: 7 ಪ್ರಮುಖ ಆಟಗಾರರು ಅಲಭ್ಯ
ಇಂಗ್ಲೆಂಡ್ ವಿರುದ್ಧದ ಸರಣಿಗೆ ನ್ಯೂಝಿಲೆಂಡ್ ಟಿ20 ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಕೇನ್ ವಿಲಿಯಮ್ಸನ್ ವಿಫಲರಾಗಿದ್ದಾರೆ. ಇದಾಗ್ಯೂ ಅವರು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಕೇನ್ ವಿಲಿಯಮ್ಸನ್ ಅಲ್ಲದೆ, ತಂಡದ ಪ್ರಮುಖ ವೇಗಿ ಬೆನ್ ಸಿಯರ್ಸ್ ಕೂಡ ಟಿ20 ತಂಡದಲ್ಲಿ ಕಾಣಿಸಿಕೊಂಡಿಲ್ಲ. ಮಂಡಿರಜ್ಜು ಗಾಯದ ಸಮಸ್ಯೆಯ ಕಾರಣ ಸಿಯರ್ಸ್ ಹೊರಗುಳಿದರೆ, ಕಾಲಿನ ನೋವಿನ ಕಾರಣ ಫಿನ್ ಅಲೆನ್ ಈ ಸರಣಿಗೆ ಅಲಭ್ಯರಾಗಿದ್ದಾರೆ. ಇನ್ನು ಪಾದದ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಆ್ಯಡಂ ಮಿಲ್ನ್ ಕೂಡ ಈ ಸರಣಿಯಿಂದ ಹೊರಗುಳಿದಿದ್ದಾರೆ. ಹಾಗೆಯೇ ಬೆನ್ನು ನೋವಿನ ಕಾರಣ ವಿಲಿಯಮ್ ಒರೋಕ್ ಸಹ ಈ ಸರಣಿಯಿಂದ ಹಿಂದೆ ಸರಿದಿದ್ದಾರೆ.