T20 World Cup: ಅರ್ಹತೆ ಪಡೆದ ಯುಎಇ: 2026 ಟಿ20 ವಿಶ್ವಕಪ್‌ಗೆ ಎಲ್ಲಾ 20 ತಂಡಗಳು ಅಂತಿಮ
ದುಬೈ: ಅಲ್ ಅಮೆರಾತ್‌ನಲ್ಲಿ ಗುರುವಾರ ನಡೆದ ಏಷ್ಯಾ-ಇಎಪಿ ಅರ್ಹತಾ ಪಂದ್ಯದಲ್ಲಿ ಜಪಾನ್ ವಿರುದ್ಧ ಎಂಟು ವಿಕೆಟ್‌ಗಳ ಜಯಗಳಿಸಿದ ಯುನೈಟೆಡ್ ಅರಬ್ ಎಮಿರೇಟ್ಸ್ 2026 ರ ಪುರುಷರ ಟಿ 20 ವಿಶ್ವಕಪ್‌ಗೆ (T20 World Cup 2026) ತನ್ನ ಸ್ಥಾನ ಖಚಿತಪಡಿಸಿಕೊಂಡಿದೆ. ಈ ಮೂಲಕ ಟಿ20 ವಿಶ್ವಕಪ್ ಗೆ 20 ತಂಡಗಳ ಪಟ್ಟಿ ಅಂತಿಮವಾಗಿದೆ. 2026ರ ಟಿ20 ವಿಶ್ವಕಪ್ ಕೂಟವು ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಆತಿಥೇಯರ ತಂಡದೊಂದಿಗೆ 2024 ರ ಆವೃತ್ತಿಯ ಅಗ್ರ ಏಳು ತಂಡಗಳು ಸೇರಲಿವೆ: ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ಇಂಗ್ಲೆಂಡ್, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಅರ್ಹತೆ ಪಡೆದಿದೆ. ಜತೆಗೆ ಟಿ20ಐ ಶ್ರೇಯಾಂಕದ ಮೂಲಕ ಅರ್ಹತೆ ಪಡೆದ ತಂಡಗಳೆಂದರೆ ನ್ಯೂಜಿಲ್ಯಾಂಡ್, ಪಾಕಿಸ್ತಾನ ಮತ್ತು ಐರ್ಲೆಂಡ್. ಖಂಡಗಳ ಅರ್ಹತಾ ಸುತ್ತಿನಿಂದ ಅಮೆರಿಕದ ಖಂಡದಿಂದ ಕೆನಡಾ ಅರ್ಹತೆ ಪಡೆದುಕೊಂಡರೆ, ಇಟಲಿ (ಐತಿಹಾಸಿಕ ಚೊಚ್ಚಲ ಪ್ರವೇಶ) ಮತ್ತು ನೆದರ್ಲ್ಯಾಂಡ್ಸ್ ಯುರೋಪ್‌ನಿಂದ ಮುನ್ನಡೆದವು. ನಮೀಬಿಯಾ ಮತ್ತು ಜಿಂಬಾಬ್ವೆ ಆಫ್ರಿಕಾ ಅರ್ಹತಾ ಸುತ್ತಿನ ಪಂದ್ಯಗಳ ಮೂಲಕ ಮುನ್ನಡೆದವು.