Ranji Trophy: ಫಿಟ್ನೆಸ್ ವಿವಾದದ ನಡುವೆ 7 ವಿಕೆಟ್ ಕಬಳಿಸಿ ಮಿಂಚಿದ ಮೊಹಮ್ಮದ್ ಶಮಿ
Mohammed Shami Ranji Trophy: ರಣಜಿ ಟ್ರೋಫಿಯಲ್ಲಿ ಮೊಹಮ್ಮದ್ ಶಮಿ ಅದ್ಭುತ ಕಮ್‌ಬ್ಯಾಕ್ ಮಾಡಿದ್ದಾರೆ. ಗಾಯದಿಂದ ಚೇತರಿಸಿಕೊಂಡು ಬಂಗಾಳ ಪರ ಆಡಿ, 7 ವಿಕೆಟ್‌ಗಳನ್ನು ಕಬಳಿಸಿ ತಮ್ಮ ಫಿಟ್‌ನೆಸ್ ಸಾಬೀತುಪಡಿಸಿದರು. 40 ಓವರ್‌ಗಳ ಬೌಲಿಂಗ್ ಮೂಲಕ ತಾವು ಸಂಪೂರ್ಣ ಫಿಟ್ ಎಂದು ಸಾರಿದರು. ಆದರೆ, ಆಯ್ಕೆದಾರ ಅಜಿತ್ ಅಗರ್ಕರ್ ಇನ್ನೂ ಅವರ ಫಿಟ್‌ನೆಸ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ. ಶಮಿ ಟೀಂ ಇಂಡಿಯಾಗೆ ಮರಳಲು ಸಿದ್ಧ.