WPL 2026: ಆರ್‌ಸಿಬಿ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ
ಮುಂಬೈ: ಸ್ಮೃತಿ ಮಂದಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ಕಣಕ್ಕಿಳಿಯಲಿದೆ.
ನವಿ ಮುಂಬೈನಲ್ಲಿ 2026ರ ಜನವರಿ 9ರಂದು (ಶುಕ್ರವಾರ) ನಿಗದಿಯಾಗಿರುವ ಪಂದ್ಯದಲ್ಲಿ, ಆರ್‌ಸಿಬಿಗೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸವಾಲೊಡ್ಡಲಿದೆ.