ರಾಜ್ಯದಲ್ಲಿ ಖಾಲಿ ಬಿದ್ದಿವೆ ಬರೋಬ್ಬರೀ 2.84 ಲಕ್ಷಕ್ಕೂ ಅಧಿಕ ಸರ್ಕಾರಿ ಹುದ್ದೆ; ನೇಮಕಾತಿಗೆ ಒಲವು ತೋರದ ಸರ್ಕಾರ
ಬೆಂಗಳೂರು: ರಾಜ್ಯದ ವಿವಿಧ ಇಲಾಖೆಗಳಲ್ಲಿ ಬರೋಬ್ಬರಿ 2.84 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಬಿದ್ದಿವೆ ಎಂದು ಸ್ವತಃ ರಾಜ್ಯ ಸರ್ಕಾರವೇ ಸದನದಲ್ಲಿ ಒಪ್ಪಿಕೊಂಡಿದೆ. ಆದರೆ, ಆರ್ಥಿಕ ಸಂಕಷ್ಟದ ಕಾರಣ ನೀಡಿರುವ ಸರ್ಕಾರ, ಶಾಲೆಯಿಂದ ಆಸ್ಪತ್ರೆಗಳವರೆಗೂ ಹಲವು ಇಲಾಖೆಗಳಲ್ಲಿ ಸರ್ಕಾರಿ ಹುದ್ದೆಗಳು ಖಾಲಿಯಿವೆ ಎಂದು ತಿಳಿದು ಬಂದಿದೆ.