ಹಾಲಿವುಡ್ ʼಅವತಾರ್ -3ʼನಲ್ಲಿ ಬಾಲಿವುಡ್ ನಟ ಗೋವಿಂದ?– ಫೋಟೋ ವೈರಲ್ ಮಾಡಿದ ನೆಟ್ಟಿಗರು.
ಮುಂಬಯಿ: ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್ (James Cameron) ಅವರ ʼಅವತಾರ್ -3ʼ (Avatar: Fire And Ash) ರಿಲೀಸ್ ಆಗಿದೆ. ಭಾರತದಲ್ಲಿ ʼಅವತಾರ್ʼ ಫ್ರಾಂಚೈಸ್‌ಗೆ ಅಪಾರ ಚಿತ್ರ ಪ್ರೇಮಿಗಳಿದ್ದಾರೆ. ಇಂಡಿಯನ್ ಬಾಕ್ಸಾಫೀಸ್‌ನಲ್ಲಿ ಈ ಹಿಂದಿನ ʼಅವತಾರ್ʼ ಸರಣಿಗಳು ದೊಡ್ಡ ಹಿಟ್ ಕಂಡಿವೆ. ಇತ್ತೀಚೆಗೆ ರಿಲೀಸ್ ಆಗಿರುವ ʼಅವತಾರ್ -3ʼ ಕೂಡ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ʼಅವತಾರ್ -3ʼಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದುವರೆಗೆ ಭಾರತದಲ್ಲಿ ಚಿತ್ರ 25.75 ಕೋಟಿ ರೂಪಾಯಿ ಗಳಿಸಿದೆ. ಕಳೆದ ಎರಡು ಫ್ರಾಂಚೈಸ್‌ಗೆ ಹೋಲಿಕೆ ಮಾಡಿದರೆ ಇದು ತೀರ ಕಡಿಮೆಯಾದ ಗಳಿಕೆ ಆಗಿದೆ.