ಭಾರತ ಬಾಂಗ್ಲಾದೇಶದ ತಂಟೆಗೆ ಹೋದರೆ ನಾವು ಉತ್ತರ ನೀಡುತ್ತೇವೆ; ಪಾಕ್ನಿಂದ ಯುದ್ಧದ ಬೆದರಿಕೆ
ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಹದಗೆಟ್ಟಿದೆ. ಇದರ ಬೆನ್ನಲ್ಲೇ ಈ ಪರಿಸ್ಥಿತಿಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳಲು ಪಾಕಿಸ್ತಾನ ಸಂಚು ರೂಪಿಸುತ್ತದೆ. ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಅಸಮಾಧಾನವನ್ನು ಮತ್ತು ಶೀತಲ ಸಮರವನ್ನು ದುರುಪಯೋಗಪಡಿಸಿಕೊಳ್ಳಲು ಪಾಕ್ ಪ್ರಯತ್ನಿಸುತ್ತಿದೆ. ಪಾಕಿಸ್ತಾನದ ಯುವ ನಾಯಕರೊಬ್ಬರ ವಿಡಿಯೋ ಹೇಳಿಕೆ ಇದೀಗ ವೈರಲ್ ಆಗಿದ್ದು, ಇದರಲ್ಲಿ ಅವರು ಬಾಂಗ್ಲಾದೇಶದ ಪರವಾಗಿ ಹೇಳಿಕೆ ನೀಡಿ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ. ಆದರೆ, ಈ ಹೇಳಿಕೆಗೆ ಭಾರತ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.