ಬೆಂಗಳೂರು ಏರ್‌ಪೋರ್ಟ್ ಪಿಕ್-ಅಪ್ ನಿಯಮ ಸಡಿಲಿಕೆ: ಫ್ರೀ ಪಾರ್ಕಿಂಗ್ 15 ನಿಮಿಷಕ್ಕೆ ವಿಸ್ತರಣೆ!
ಬೆಂಗಳೂರು (ಡಿ.26): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 1 ರಲ್ಲಿ ಜಾರಿಗೊಳಿಸಲಾದ ನೂತನ ಪಿಕ್-ಅಪ್ ಮತ್ತು ಕರ್ಬ್‌ಸೈಡ್ ವ್ಯವಸ್ಥೆಯಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ಬಿಐಎಎಲ್ (BIAL) ಕೆಲವು ಪ್ರಮುಖ ತಿದ್ದುಪಡಿಗಳನ್ನು ತಂದಿದೆ. ಪ್ರಯಾಣಿಕರಿಂದ ವ್ಯಕ್ತವಾದ ಪ್ರತಿಕ್ರಿಯೆಗಳನ್ನು ಪರಿಗಣಿಸಿ, ಉಚಿತ ಪಾರ್ಕಿಂಗ್ ಅವಧಿಯನ್ನು ವಿಸ್ತರಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.