Bengaluru: ಹೊಸ ವರ್ಷದ ಪಾರ್ಟಿಗೆ KORA ಕಡೆ ಹೋಗೋ ಪ್ಲ್ಯಾನ್ ಇದ್ಯಾ, ಸಂಚಾರ ಬದಲಾವಣೆ ನೋಡಿಕೊಳ್ಳಿ..
ಬೆಂಗಳೂರು (ಡಿ.29): ಹೊಸ ವರ್ಷದ ಸಂಭ್ರಮ ಬೆಂಗಳೂರಿನಲ್ಲಿ ವಿವಿಧಕಡೆ ನಡೆಯುತ್ತಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಪ್ರಮುಖ ತಾಣವಾಗಿದ್ದರೆ, ಜೆನ್‌ಜೀ ಕಿಡ್ಸ್‌ಗಳ ಫೇವರಿಟ್ KORA ಅಂದರೆ, ಕೋರಮಂಗಲದಲ್ಲೂ ಭರ್ಜರಿ ಆಚರಣೆ ನಡೆಯುತ್ತದೆ. ಕಾರ್ಪೋರೇಟ್ ಕಂಪನಿಗಳ ಬೀಡಾಗಿರುವ ಕೋರಮಂಗಲದಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಸಂಚಾರದಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಅವುಗಳ ವಿವರವನ್ನು ಟ್ರಾಫಿಕ್ ಪೊಲೀಸರು ಪ್ರಕಟಿಸಿದ್ದಾರೆ. ಕಾರು, ಬೈಕ್‌ನಲ್ಲಿ ಹೊಸ ವರ್ಷದಂದು KORA ಕಡೆ ಹೋಗೋದಿದ್ರೆ, ಈ ಬದಲಾವಣೆ ನೋಡಿಕೊಳ್ಳುವುದು ಒಳ್ಳೆಯದು.