‘ಗ್ರಾಹಕರ ತಪ್ಪಿಗೂ ನಮಗೆ ದಂಡ’: 10 ನಿಮಿಷ ಡೆಲಿವರಿ ವಿರೋಧಿಸಿ ಡಿ. 31ರಂದು ಗಿಗ್ ಕಾರ್ಮಿಕರ ಮುಷ್ಕರ
ಬೆಂಗಳೂರು ಗಿಗ್ ಕಾರ್ಮಿಕರು ಡಿಸೆಂಬರ್ 31ರಂದು ಮುಷ್ಕರಕ್ಕೆ ಕರೆ ನೀಡಿದ್ದಾರೆ. 10 ನಿಮಿಷಗಳ ಡೆಲಿವರಿ ನಿಷೇಧ, ನ್ಯಾಯಯುತ ವೇತನ ಮತ್ತು ಸಾಮಾಜಿಕ ಭದ್ರತೆ ಸೇರಿ ಹಲವು ಪ್ರಮುಖ ಬೇಡಿಕೆಗಳನ್ನಿಟ್ಟುಕೊಂಡು ಪ್ರತಿಭಟನೆಗೆ ಕರೆ ನೀಡಲಾಗಿದೆ. ಈ ಪ್ರತಿಭಟನೆಯಿಂದಾಗಿ ಹೊಸ ವರ್ಷದ ಹಿಂದಿನ ದಿನ ಬೆಂಗಳೂರಿನ ಆಹಾರ ವಿತರಣೆ ಮತ್ತು ಕ್ಯಾಬ್ ಸೇವೆಗಳಿಗೆ ತೀವ್ರ ತೊಂದರೆ ನೀಡುವ ಸಾಧ್ಯತೆ ಇದ್ದು, ಇದರಿಂದ ರೆಸ್ಟೋರೆಂಟ್‌ಗಳಿಗೆ ಭಾರಿ ನಷ್ಟದ ಆತಂಕ ಎದುರಾಗಿದೆ.