ಜನಾರ್ದನ್ ರೆಡ್ಡಿಯನ್ನ ಟಾರ್ಗೆಟ್ ಮಾಡಿ ದಾಳಿ, ಪೆಟ್ರೋಲ್ ಬಾಂಬ್ ತಂದಿದ್ದರು -ಶ್ರೀರಾಮುಲು ಆಕ್ರೋಶ
ಬಳ್ಳಾರಿ: ಬ್ಯಾನರ್ ಗಲಾಟೆ ಪ್ರಕರಣ ಸಂಬಂಧ ಶಾಸಕರಾದ ಜನಾರ್ದನ ರೆಡ್ಡಿ, ಶ್ರೀರಾಮುಲು ಜಂಟಿ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಮಾತನಾಡಿದ ಬಿ. ಶ್ರೀರಾಮುಲು, ನಿನ್ನೆಯ ಘಟನೆ ನಮ್ಮೆಲ್ಲರಿಗೂ ನೋವು ತಂದಿದೆ. ನಡೆಯಬಾರದ ಸನ್ನಿವೇಶ ನಡೆದಿದೆ. 26 ವರ್ಷದ ಅಮಾಯಕ ಯುವಕನ ಸಾವಾಯಾಗಿದೆ. ಆ ಯುವಕ ಯಾವ ಪಕ್ಷ ಸೇರಿಲ್ಲ. ಆದ್ರೆ ಸಾವನ್ನಪ್ಪಿದ ಯುವಕ ಕಾಂಗ್ರೆಸ್ ಅಂತಿದ್ದಾರೆ. ಯವಕನ ಸಾವಿಗೆ ಸಂತಾಪ ಸೂಚಿಸ್ತಿವೆ ಎಂದರು.