ಚುನಾವಣಾ ವ್ಯವಸ್ಥೆ, ಇವಿಎಂ ವಿಶ್ವಾಸಾರ್ಹ ಎಂದ ಕರ್ನಾಟಕದ ಶೇ.83 ರಷ್ಟು ಜನರು: ಚುನಾವಣಾ ಆಯೋಗದ ಸಮೀಕ್ಷೆ
ಕರ್ನಾಟಕದಲ್ಲಿ ಚುನಾವಣಾ ಆಯೋಗವು ನಡೆಸಿದ ಸಮೀಕ್ಷೆಯಲ್ಲಿ ಜನರು ಇವಿಎಂಗಳ ಬಗ್ಗೆ ನಂಬಿಕೆ, ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಶೇ.83 ರಷ್ಟು ಜನರು ಇವಿಎಂಗಳು ನಂಬಿಕೆಗೆ ಅರ್ಹ ಎಂದು ಹೇಳಿರುವುದು ವಿಶೇಷ. ಚುನಾವಣಾ ವ್ಯವಸ್ಥೆ ಹಾಗೂ ಇವಿಎಂಗಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವೋಟ್ ಚೋರಿ ಅಭಿಯಾನವನ್ನು ಕರ್ನಾಟಕದ ಜನರು ಒಪ್ಪಿಕೊಂಡಿಲ್ಲ ಎಂಬಂತಾಗಿದೆ.