ಮೂರು ಮಕ್ಕಳ ತಾಯಿ ಜೊತೆಗೆ ಲವ್ವಿ ಡವ್ವಿ ಇಟ್ಟುಕೊಂಡಿದ್ದ ಯುವಕನಿಗೆ ಗಂಡನಿಂದಲೇ ಸರಿಯಾದ ಶಾಸ್ತಿಯಾಗಿದೆ. ಮರಕ್ಕೆ ಕಟ್ಟಿ ಆತನ ಮೇಲೆ ಆಂಟಿ ಗಂಡ ಹಾಗೂ ಸಹೋದರರು ಹಲ್ಲೆ ನಡೆಸಿದ್ದಾರೆ.
ಮೂರು ಮಕ್ಕಳ ತಾಯಿಯೊಂದಿಗೆ (Married Women) ಸಂಬಂಧ ಹೊಂದಿದ್ದ ಯುವಕನಿಗೆ (Young Man) ಆಕೆಯ ಗಂಡ ಮತ್ತು ಸಹೋದರರಿಂದ ಸರಿಯಾದ ಶಾಸ್ತಿಯಾಗಿದೆ. ಮರಕ್ಕೆ ಕಟ್ಟಿ ಆತನ ಮೇಲೆ ಆಂಟಿ ಗಂಡ ಹಾಗೂ ಸಹೋದರರು ಹಲ್ಲೆ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಹೊರವಲಯದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ವಿವಾಹಿತ ಮಹಿಳೆಯನ್ನು ಭೇಟಿಯಾಗಲು ಹೋಗುತ್ತಿದ್ದ ಯುವಕನ ಮೇಲೆ ಮಹಿಳೆಯ ಗಂಡ ಮತ್ತು ಸಹೋದರರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.