Breaking: ಅಮೆರಿಕದ ವಾರ್ನಿಂಗ್ ಬೆನ್ನಲ್ಲೇ ವೆನುಜುವೇಲ ರಾಜಧಾನಿ Caracas ಬಳಿ ಸಾಲು ಸಾಲು ಸ್ಫೋಟ
ನವದೆಹಲಿ (ಜ.3): ಡ್ರಗ್ ರಾಕೆಟ್ ಬಗ್ಗೆ ಅಮೆರಿಕದ ವಾರ್ನಿಂಗ್ ಬೆನ್ನಲ್ಲೇ ಶನಿವಾರ ಬೆಳಿಗ್ಗೆ ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್‌ನಲ್ಲಿ ಕನಿಷ್ಠ ಏಳು ಸ್ಫೋಟಗಳು ಸಂಭವಿಸಿವೆ. ಮೊದಲ ಸ್ಫೋಟ ಸ್ಥಳೀಯ ಸಮಯ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಸಂಭವಿಸಿದೆ. ಇದಲ್ಲದೆ, ರಾಜಧಾನಿಯ ವಾಯುಪ್ರದೇಶದ ಮೇಲೆ ಕಡಿಮೆ ಎತ್ತರದಲ್ಲಿ ಯುದ್ಧವಿಮಾನಗಳು ಹಾರುವ ಶಬ್ದವೂ ಕೇಳಿಬಂದಿದೆ. ಸ್ಪೋಟಗಳ ಶಬ್ದ ಕೇಳಿ ನಗರದ ವಿವಿಧ ಪ್ರದೇಶಗಳಲ್ಲಿನ ಜನರು ಭಯಭೀತರಾಗಿ ಬೀದಿಗೆ ಇಳಿದಿದ್ದಾರೆ. ಕ್ಯಾರಕಾಸ್‌ನ ಕೆಲವು ಭಾಗಗಳಲ್ಲಿ ಜನರು ಹೊರಗೆ ನಿಂತಿರುವುದು ಕಂಡು ಬಂದಿದೆ. ಆದರೆ, ರಾಜಧಾನಿ ಮೇಲೆ ಆದ ದಾಳಿಯ ಬಗ್ಗೆ ವೆನುಜುವೇಲ ಸರ್ಕಾರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.