T20 World Cup: ಒತ್ತಡಕ್ಕೆ ಮಣಿದ ಪಾಕ್: ಭಾರತದ ವಿರುದ್ಧ ವಿಶ್ವಕಪ್ ಆಡಲು ಒಪ್ಪಿಗೆ
ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ವಿಶ್ವದಲ್ಲಿರುವ ಹುಲಿಗಳಲ್ಲಿ ಶೇ.70ರಷ್ಟು ಭಾರತದಲ್ಲಿಯೇ ಇವೆ ಎಂದು ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ ನಿರ್ದೇಶಕ ಡಾ. ಎಸ್.ಪಿ. ಯಾದವ್ ಹೇಳಿದರು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೇಲುಕಾಮನಹಳ್ಳಿಯಲ್ಲಿ ನಡೆದ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಹುಲಿ, ಸಿಂಹ, ಚಿರತೆ, ಚೀತಾ, ಹಿಮಚಿರತೆ ಸೇರಿದಂತೆ ಬಿಗ್ ಕ್ಯಾಟ್ ಪ್ರಭೇದಗಳ ಸಂರಕ್ಷಣೆಯೇ ಈ ವೇದಿಕೆಯ ಪ್ರಮುಖ ಉದ್ದೇಶ ಎಂದರು.
ದೇಶದಲ್ಲಿ ಸುಮಾರು 14 ಸಾವಿರದಿಂದ 15 ಸಾವಿರ ಚಿರತೆಗಳಿದ್ದು, ಸಿಂಹಗಳ ಸಂಖ್ಯೆಯೂ ಗಮನಾರ್ಹವಾಗಿ ಹೆಚ್ಚಾಗಿದೆ.
ಬಿಗ್ ಕ್ಯಾಟ್ ಸಂರಕ್ಷಣೆಯಲ್ಲಿ ಭಾರತ ವಿಶ್ವಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು. 1952ರಲ್ಲಿ ಸಂಪೂರ್ಣ ನಾಶವಾದ ಚೀತಾಗಳನ್ನು ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ತರಿಸಿ ಪುನರ್ ಪರಿಚಯಿಸಿದ ಪರಿಣಾಮ ಇಂದು ದೇಶದಲ್ಲಿ 35 ಚೀತಾಗಳಿವೆ ಎಂದು ಹೇಳಿದರು.
ಈ ಶೃಂಗಸಭೆಯಲ್ಲಿ ವಿಶ್ವದ 23 ದೇಶಗಳ 39 ಪ್ರತಿನಿಧಿಗಳು ಭಾಗವಹಿಸಿದ್ದು, ಬಿಗ್ ಕ್ಯಾಟ್ ಪ್ರಭೇದಗಳ ಉಳಿವು ಹಾಗೂ ಸಂರಕ್ಷಣೆಗೆ ಸಂಬಂಧಿಸಿದಂತೆ ವಿಚಾರ ವಿನಿಮಯ ಮತ್ತು ಸಂವಾದ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಾಲ್ಕಡೆ, ಎಪಿಪಿಸಿಎಫ್ ಮನೋರಂಜನ್, ಬಿಸ್ವಜಿತ್ ಮಿಶ್ರಾ, ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್, ಚಾಮರಾಜನಗರ ಸಿಸಿಎಫ್ ಮಾಲತಿ ಪ್ರಿಯಾ, ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್. ಪ್ರಭಾಕರನ್ ಮತ್ತು ಎಸಿಎಫ್ ನವೀನ್ ಕುಮಾರ್ ಉಪಸ್ಥಿತರಿದ್ದರು.