ಟ್ರಂಪ್ ದಾಳಿ ಭೀತಿ: 37 ವರ್ಷದ ಸಂಪ್ರದಾಯಕ್ಕೆ ಇರಾನ್ ಖಮೇನಿ ಗುಡ್‌ಬೈ
ವಾಷಿಂಗ್ಟನ್: ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ಬೇಸಿಗೆ ಶಿಬಿರಗಳಲ್ಲಿ ಪ್ರೇರಣಾದಾಯಕ ಭಾಷಣ ಮಾಡುವ ಮೂಲಕ ಹಾಗೂ ಉನ್ನತ ಶಿಕ್ಷಣಕ್ಕೆ ಹಣಕಾಸು ನೆರವು ನೀಡುವ ನೆಪದಲ್ಲಿ ಹುಡುಗಿಯರನ್ನು ತನ್ನತ್ತ ಸೆಳೆಯುತ್ತಿದ್ದನೆಂಬ ಮಾಹಿತಿ ಬಹಿರಂಗವಾಗಿದೆ. ಹುಡುಗಿಯರ ತಾಯಂದಿರನ್ನು ತನ್ನ ನಿವಾಸಕ್ಕೆ ಕರೆಸಿ ಮಗಳ ಬಗ್ಗೆ ಹೊಗಳಿ ನಂಬಿಕೆ ಗಳಿಸಿ, ಬಳಿಕ ಮಸಾಜ್ ಮಾಡುವಂತೆ ಒತ್ತಾಯಿಸಿ ಅತ್ಯಾಚಾರ ನಡೆಸುತ್ತಿದ್ದನೆಂದು ಫೈಲ್‌ಗಳಲ್ಲಿ ಉಲ್ಲೇಖಿಸಲಾಗಿದೆ.
14 ವರ್ಷದ ‘ಜೇನ್’ ಎಂಬ ಬಾಲಕಿಯನ್ನು ಇದೇ ರೀತಿ ಸೆಳೆದು, ತನ್ನ ಮನೆಯಲ್ಲಿ ಇರಿಸಿಕೊಂಡು ದೌರ್ಜನ್ಯ ಎಸಗಿದ್ದ ಘಟನೆ ಸೇರಿ ನೂರಾರು ಪ್ರಕರಣಗಳು ನಡೆದಿವೆ ಎಂದು ದಾಖಲೆಗಳು ತಿಳಿಸಿವೆ. ಈ ನಡುವೆ ಎಪ್‌ಸ್ಟೀನ್ ಜೊತೆ ಹಣಕಾಸು ಸಂಬಂಧ ಹೊಂದಿದ್ದ ಹಿನ್ನೆಲೆ ಫ್ರಾನ್ಸ್‌ನ ಮಾಜಿ ಸಂಸ್ಕೃತಿ ಸಚಿವ ಜಾಕ್ ಲ್ಯಾಂಗ್ ಪ್ಯಾರಿಸ್ ಕಲ್ಚರಲ್ ಸೆಂಟರ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕೌಲಾಲಂಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಎರಡು ದಿನಗಳ ಮಲೇಷ್ಯಾ ಭೇಟಿ ವೇಳೆ ವ್ಯಾಪಾರ, ಹೂಡಿಕೆ, ರಕ್ಷಣೆ, ಇಂಧನ, ಸೆಮಿಕಂಡಕ್ಟರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಉದ್ದೇಶದಿಂದ ಆರು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರೊಂದಿಗೆ ನಡೆದ ಮಾತುಕತೆ ಬಳಿಕ ಒಟ್ಟು 11 ದಾಖಲೆಗಳಿಗೆ ಉಭಯ ದೇಶಗಳು ಸಹಿ ಹಾಕಿವೆ.
ವಿಪತ್ತು ನಿರ್ವಹಣೆ, ಜಂಟಿ ಸಿನಿಮಾ ನಿರ್ಮಾಣ, ಭ್ರಷ್ಟಾಚಾರ ವಿರೋಧಿ ಸಹಕಾರ, ವಿಶ್ವಸಂಸ್ಥೆ ಶಾಂತಿಪಾಲನೆ, ಸೆಮಿಕಂಡಕ್ಟರ್ ಉತ್ಪಾದನೆ ಹಾಗೂ ಇಂಟರ್‌ನ್ಯಾಷನಲ್ ಬಿಗ್ ಕ್ಯಾಟ್ಸ್ ಅಲಯನ್ಸ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದಲ್ಲದೆ ಆರೋಗ್ಯ, ಸಾಮಾಜಿಕ ಭದ್ರತೆ, ವೈದ್ಯಕೀಯ ಸಂಶೋಧನೆ, ಹೊಸ ಕಾನ್ಸುಲೇಟ್ ಸ್ಥಾಪನೆ ಮತ್ತು ಹೂಡಿಕೆ ಉತ್ತೇಜನ ಕುರಿತೂ ಉಭಯ ದೇಶಗಳು ಸಹಕಾರ ವಿಸ್ತರಿಸಲು ನಿರ್ಧರಿಸಿವೆ.