... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ರೈಲ್ವೆ ಇಲಾಖೆಯಿಂದ ಮೆಗಾ ಆಪರೇಷನ್: 3 ಕೋಟಿ IRCTC ಯೂಸರ್ ಐಡಿಗಳು ಬಂದ್! ಕಾರಣವೇನು ಗೊತ್ತಾ?

ರೈಲ್ವೆ ಇಲಾಖೆಯಿಂದ ಮೆಗಾ ಆಪರೇಷನ್: 3 ಕೋಟಿ IRCTC ಯೂಸರ್ ಐಡಿಗಳು ಬಂದ್! ಕಾರಣವೇನು ಗೊತ್ತಾ?

ರೈಲು ಪ್ರಯಾಣಿಕರಿಗೆ ಕನ್ಫರ್ಮ್ ಟಿಕೆಟ್ ಸಿಗುವುದು ಸುಲಭವಾಗಲಿ ಎಂಬ ಉದ್ದೇಶದಿಂದ ಭಾರತೀಯ ರೈಲ್ವೆ ಮತ್ತು ಐಆರ್‌ಸಿಟಿಸಿ (IRCTC) ಅಕ್ರಮ ದಲ್ಲಾಳಿಗಳ ವಿರುದ್ಧ ಸಮರ ಸಾರಿದೆ. ಇದರ ಭಾಗವಾಗಿ ದೇಶಾದ್ಯಂತ ಸಕ್ರಿಯವಾಗಿದ್ದ ಸುಮಾರು 3 ಕೋಟಿಗೂ ಹೆಚ್ಚು ನಕಲಿ ಮತ್ತು ಅನುಮಾನಾಸ್ಪದ ಯೂಸರ್ ಐಡಿಗಳನ್ನು ಡಿ-ಆಕ್ಟಿವೇಟ್ (Deactivate) ಮಾಡಲಾಗಿದೆ. ನಕಲಿ ಐಡಿಗಳ ಮೇಲೆ ರೈಲ್ವೆ ಕಣ್ಣು ಅನೇಕ ದಲ್ಲಾಳಿಗಳು ಮತ್ತು ಅನಧಿಕೃತ ಏಜೆಂಟ್‌ಗಳು ನೂರಾರು ನಕಲಿ ಐಡಿಗಳನ್ನು ಸೃಷ್ಟಿಸಿಕೊಂಡು, ಸಾಮಾನ್ಯ ಪ್ರಯಾಣಿಕರಿಗೆ ಟಿಕೆಟ್ ಸಿಗದಂತೆ ಮಾಡುತ್ತಿದ್ದರು. 

ವಿಶೇಷವಾಗಿ ಹಬ್ಬದ ಸೀಸನ್‌ಗಳಲ್ಲಿ ಮತ್ತು ತತ್ಕಾಲ್ ಬುಕಿಂಗ್ ಸಮಯದಲ್ಲಿ ಇಲ್-ಲೀಗಲ್ ಸಾಫ್ಟ್‌ವೇರ್ ಬಳಸಿ ಕ್ಷಣಮಾತ್ರದಲ್ಲಿ ಟಿಕೆಟ್‌ಗಳನ್ನು ಕಬಳಿಸುತ್ತಿದ್ದರು. ಇದನ್ನು ತಡೆಯಲು ರೈಲ್ವೆ ಇಲಾಖೆ ಈಗ ಬೃಹತ್ ಶುದ್ಧೀಕರಣ ಪ್ರಕ್ರಿಯೆ ನಡೆಸಿದೆ. ಯಾವ ಐಡಿಗಳನ್ನು ಬಂದ್ ಮಾಡಲಾಗಿದೆ? ಲಿಂಕ್ ಆಗದ ದಾಖಲೆಗಳು: ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಂಬವನ್ನು ದೃಢೀಕರಿಸದ ಐಡಿಗಳು. ಅನುಮಾನಾಸ್ಪದ ಚಟುವಟಿಕೆ: ಒಂದೇ ಐಪಿ ಅಡ್ರೆಸ್‌ನಿಂದ ನೂರಾರು ಐಡಿಗಳನ್ನು ಬಳಸಿ ಟಿಕೆಟ್ ಬುಕ್ ಮಾಡುತ್ತಿದ್ದ ಖಾತೆಗಳು. ಅಕ್ರಮ ದಲ್ಲಾಳಿಗಳು: ವೈಯಕ್ತಿಕ ಐಡಿಗಳನ್ನು ಬಳಸಿ ವಾಣಿಜ್ಯ ಉದ್ದೇಶಕ್ಕಾಗಿ ಟಿಕೆಟ್ ಮಾರಾಟ ಮಾಡುತ್ತಿದ್ದವರ ಐಡಿಗಳು.

 ನಿಷ್ಕ್ರಿಯ ಖಾತೆಗಳು: ದೀರ್ಘಕಾಲದವರೆಗೆ ಯಾವುದೇ ಚಟುವಟಿಕೆ ನಡೆಸದ ಮತ್ತು ಕೆವೈಸಿ (KYC) ಪೂರ್ಣಗೊಳಿಸದ ಐಡಿಗಳು. ಸಾಮಾನ್ಯ ಪ್ರಯಾಣಿಕರಿಗೆ ಏನು ಲಾಭ? ಈ 3 ಕೋಟಿ ನಕಲಿ ಐಡಿಗಳನ್ನು ರದ್ದುಗೊಳಿಸಿರುವುದರಿಂದ, ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಆ್ಯಪ್‌ನಲ್ಲಿ ಟ್ರಾಫಿಕ್ ಕಡಿಮೆ ಆಗಲಿದೆ. ಇದರಿಂದಾಗಿ ಸಾಮಾನ್ಯ ಪ್ರಯಾಣಿಕರು ಲಾಗಿನ್ ಆಗುವಾಗ ಮತ್ತು ಟಿಕೆಟ್ ಬುಕ್ ಮಾಡುವಾಗ ಎದುರಿಸುತ್ತಿದ್ದ ಸರ್ವರ್ ಸಮಸ್ಯೆ ತಗ್ಗಲಿದೆ. ತತ್ಕಾಲ್ ಟಿಕೆಟ್ ಪಡೆಯುವಾಗ ಸಾಮಾನ್ಯ ಜನರಿಗೆ ಹೆಚ್ಚಿನ ಅವಕಾಶ ಸಿಗಲಿದೆ. ನಿಮ್ಮ ಐಡಿ ಸುರಕ್ಷಿತವಾಗಿರಲು ಏನು ಮಾಡಬೇಕು? ನಿಮ್ಮ ಐಆರ್‌ಸಿಟಿಸಿ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ. ಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ವೆರಿಫೈ ಮಾಡಿ. ವೈಯಕ್ತಿಕ ಐಡಿಯನ್ನು ಇತರರಿಗೆ ಟಿಕೆಟ್ ಬುಕ್ ಮಾಡಿ ಹಣ ಪಡೆಯಲು ಬಳಸಬೇಡಿ (ಇದು ಕಾನೂನುಬಾಹಿರ). ರೈಲ್ವೆ ಇಲಾಖೆಯ ಈ ದಿಟ್ಟ ಕ್ರಮವು ಟಿಕೆಟ್ ಕಳ್ಳದಂಧೆಗೆ ದೊಡ್ಡ ಹೊಡೆತ ನೀಡಿದ್ದು, ಮುಂಬರುವ ದಿನಗಳಲ್ಲಿ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಮತ್ತಷ್ಟು ಪಾರದರ್ಶಕತೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

Source : News First

2 hours ago

Home Flash News