ಬಿ.ಎಸ್.ಯಡಿಯೂರಪ್ಪಗೆ 84 ನೇ ಹುಟ್ಟುಹಬ್ಬದ ಸಂಭ್ರಮ- ರಾಜಕೀಯ ಜೀವನದ ಹಿನ್ನೋಟ ಇಲ್ಲಿದೆ ಓದಿ
ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ನಾಲ್ಕು ಭಾರಿ ಸಿಎಂ ಆಗಿ ಆಳ್ವಿಕೆ ನಡೆಸಿದವರು. ಇಂದು 84ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕಡುಕಷ್ಟದ ಬದುಕಿನಲ್ಲಿ ಬೆಳೆದು ಬಂದ ಯಡಿಯೂರಪ್ಪ ಸೆಲ್ಪ್ ಮೇಡ್ ಮ್ಯಾನ್. ಬಿಎಸ್‌ವೈ ರಾಜಕೀಯ ಜೀವನದ ಹಾದಿಯ ಒಂದು ಸಂಕ್ಷಿಪ್ತ ಹಿನ್ನೋಟ ಇಲ್ಲಿದೆ ಓದಿ. ರಾಜ್ಯದ ಹಿರಿಯ ರಾಜಕಾರಣಿ ಬಿ.ಎಸ್.ಯಡಿಯೂರಪ್ಪ ಇಂದು 84ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಯಡಿಯೂರಪ್ಪ ಹುಟ್ಟುಹಬ್ಬವನ್ನು ಕುಟುಂಬಸ್ಥರು ಹಾಗೂ ಬೆಂಬಲಿಗರು ಆಚರಿಸುತ್ತಿದ್ದಾರೆ. ಯಡಿಯೂರಪ್ಪ ರಾಜಕೀಯಕ್ಕೆ ಎಂಟ್ರಿಯಾಗಿ 50 ವರ್ಷ ಕೂಡ ಪೂರ್ಣವಾಗಿದೆ. ಬಿ.ಎಸ್. ಯಡಿಯೂರಪ್ಪ ರಾಜಕೀಯ ಜೀವನದ 50 ಪ್ರಮುಖ ಘಟ್ಟಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದೇವೆ. ಓದಿ.