... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಆರ್​ಸಿಬಿ ಖರೀದಿಗೆ ವಿದೇಶಿ ಕುಬೇರರ ಪೈಪೋಟಿ: ಅದಾನಿ,

ಆರ್​ಸಿಬಿ ಖರೀದಿಗೆ ವಿದೇಶಿ ಕುಬೇರರ ಪೈಪೋಟಿ: ಅದಾನಿ, ಜಿಂದಾಲ್​ಗೆ ಟಕ್ಕರ್ ಕೊಡ್ತಾರಾ ಅಮೆರಿಕದ ಕೋಟ್ಯಾಧಿಪತಿಗಳು?

ಬೆಂಗಳೂರು: ಐಪಿಎಲ್ ಸೀಸನ್-19 (IPL Season 19) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದರ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಲೀಕತ್ವದ ಬದಲಾವಣೆಯ ವಿಚಾರ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆರ್​ಸಿಬಿ ಫ್ರಾಂಚೈಸಿಯನ್ನು ಖರೀದಿಸಲು ದೇಶ ಮತ್ತು ವಿದೇಶಗಳ ದಿಗ್ಗಜ ಕಂಪನಿಗಳು ಮುಗಿಬಿದ್ದಿದ್ದು, ಒಂದು ತಂಡಕ್ಕಾಗಿ ಬರೋಬ್ಬರಿ 10 ಮಂದಿ ಕೋಟ್ಯಾಧಿಪತಿಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಆರ್​ಸಿಬಿ ಎಂಬ ಬ್ರ್ಯಾಂಡ್ ಅನ್ನು ತಮ್ಮದಾಗಿಸಿಕೊಳ್ಳಲು ಯಾರೆಲ್ಲಾ ಕ್ಯೂನಲ್ಲಿದ್ದಾರೆ? ಇಲ್ಲಿದೆ ಬಿಡ್ಡಿಂಗ್ ಕದನದ ಕಂಪ್ಲೀಟ್ ಡಿಟೇಲ್ಸ್.

 ಒಂದು ಫ್ರಾಂಚೈಸಿ, ಹತ್ತಾರು ಬಿಡ್‌ದಾರರು! ಕಳೆದ ನವೆಂಬರ್‌ನಲ್ಲಿ ಪ್ರಸ್ತುತ ಮಾಲೀಕರಾದ ಡಿಯಾಜಿಯೋ (Diageo) ಕಂಪನಿ, ಆರ್​ಸಿಬಿ ಫ್ರಾಂಚೈಸಿಯ ಮಾರಾಟ ಅಥವಾ ಹೂಡಿಕೆಗೆ ಮುಕ್ತವಾಗಿರುವುದಾಗಿ ಘೋಷಿಸಿತ್ತು. ಆರ್​ಸಿಬಿ ಕೇವಲ ಒಂದು ತಂಡವಲ್ಲ, ಅದೊಂದು ಎಮೋಷನ್. ಕಳೆದ 18 ವರ್ಷಗಳ ಪರಂಪರೆ, ಬ್ರ್ಯಾಂಡ್ ಬೆಂಗಳೂರು ಮತ್ತು ವಿರಾಟ್ ಕೊಹ್ಲಿಯಂತಹ (Virat Kohli) ಸೂಪರ್ ಸ್ಟಾರ್ ಆಟಗಾರನ ಇರುವಿಕೆ ತಂಡದ ಮೌಲ್ಯವನ್ನು ಗಗನಕ್ಕೇರಿಸಿದೆ. ಹೀಗಾಗಿಯೇ ಆರ್​ಸಿಬಿ ಖರೀದಿಗೆ ದೇಶ-ವಿದೇಶಗಳ ಶ್ರೀಮಂತರು ಸಾವಿರಾರು ಕೋಟಿ ಸುರಿಯಲು ಮುಂದಾಗಿದ್ದಾರೆ. ರೇಸ್‌ನಲ್ಲಿದ್ದಾರೆ ಅಮೆರಿಕದ ಬಿಲಿಯನೇರ್‌ಗಳು: ಲ್ಯಾನ್ಸರ್ ಕ್ಯಾಪಿಟಲ್ (Lancer Capital): ಮ್ಯಾಂಚೆಸ್ಟರ್ ಯುನೈಟೆಡ್ ಸಹ-ಮಾಲೀಕ ಅವ್ರಾಮ್ ಗ್ಲೇಝರ್ ಒಡೆತನದ ಲ್ಯಾನ್ಸರ್ ಕ್ಯಾಪಿಟಲ್ ಆರ್​ಸಿಬಿ ಖರೀದಿಗೆ ಭಾರೀ ಆಸಕ್ತಿ ತೋರಿದೆ. 

ಈಗಾಗಲೇ ದೊಡ್ಡ ಮೊತ್ತದ ಬಿಡ್ ಸಲ್ಲಿಸಿರುವ ಈ ಕಂಪನಿ, ಬೆಂಗಳೂರು ತಂಡವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಪಣತೊಟ್ಟಿದೆ. ಡೇವಿಡ್ ಬ್ಲಿಟ್ಜರ್ (David Blitzer): ಇವರಿಗೆ ಪೈಪೋಟಿ ನೀಡಲು ಅಮೆರಿಕದ ಮತ್ತೊಬ್ಬ ಉದ್ಯಮಿ ಡೇವಿಡ್ ಬ್ಲಿಟ್ಜರ್ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಎನ್‌ಬಿಎ ಮತ್ತು ಎನ್‌ಎಚ್‌ಎಲ್ ತಂಡಗಳ ಒಡೆಯರಾಗಿರುವ ಇವರು, ಆರ್​ಸಿಬಿ ಮಾಲೀಕರೊಂದಿಗೆ ನೇರ ಮಾತುಕತೆ ನಡೆಸಿದ್ದು, ಮೇಜರ್ ಪಾಲನ್ನು ಖರೀದಿಸುವ ಲೆಕ್ಕಾಚಾರದಲ್ಲಿದ್ದಾರೆ. ಭಾರತೀಯ ಕುಬೇರರ ಸವಾಲು: ವಿದೇಶಿ ಕಂಪನಿಗಳಿಗೆ ಸೆಡ್ಡು ಹೊಡೆಯಲು ಭಾರತದ ಟಾಪ್ ಉದ್ಯಮಿಗಳು ಕೂಡ ಅಖಾಡಕ್ಕಿಳಿದಿದ್ದಾರೆ. ಅದಾನಿ ಗ್ರೂಪ್: ಕ್ರೀಡಾ ವಲಯದಲ್ಲಿ ಹಿಡಿತ ಸಾಧಿಸುತ್ತಿರುವ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಆರ್​ಸಿಬಿ ಮೇಲೆ ಕಣ್ಣಿಟ್ಟಿದೆ. ಜಿಂದಾಲ್ & ಮಣಿಪಾಲ್: ಡೆಲ್ಲಿ ಕ್ಯಾಪಿಟಲ್ಸ್ ಸಹ-ಮಾಲೀಕ ಪಾರ್ಥ್ ಜಿಂದಾಲ್ ಮತ್ತು ಮಣಿಪಾಲ್ ಗ್ರೂಪ್ ಕೂಡ ಆರ್​ಸಿಬಿ ಖರೀದಿಗೆ ಮುಂದಾಗಿವೆ.

Source : News First

1 hour ago

Home Flash News