... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಭಾರತ vs ಇಂಗ್ಲೆಂಡ್ ಸೆಮಿಫೈನಲ್:

ಭಾರತ vs ಇಂಗ್ಲೆಂಡ್ ಸೆಮಿಫೈನಲ್: ಮಳೆಯಿಂದ ಪಂದ್ಯ ರದ್ದಾದರೆ ಫೈನಲ್‌ಗೆ ಹೋಗುವ ತಂಡ ಯಾವುದು?

ಐಸಿಸಿ ಟಿ20 ವಿಶ್ವಕಪ್ 2026ರ ರೋಚಕತೆ ಈಗ ತುತ್ತತುದಿಗೆ ತಲುಪಿದೆ. ಗುರುವಾರ ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಏನಾಗಬಹುದು? ಫೈನಲ್ ಟಿಕೆಟ್ ಯಾರಿಗೆ ಸಿಗಲಿದೆ? ಐಸಿಸಿ ಟಿ20 ವಿಶ್ವಕಪ್ 2026ರ ರೋಚಕತೆ ಈಗ ತುತ್ತತುದಿಗೆ ತಲುಪಿದೆ. ಗುರುವಾರ ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಏನಾಗಬಹುದು? ಫೈನಲ್ ಟಿಕೆಟ್ ಯಾರಿಗೆ ಸಿಗಲಿದೆ? ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. 

ಸೆಮಿಫೈನಲ್‌ಗೆ ಇದೆ 'ರಿಸರ್ವ್ ಡೇ' ಐಸಿಸಿ ನಿಯಮದಂತೆ ನಾಕೌಟ್ ಪಂದ್ಯಗಳಿಗೆ ಮೀಸಲು ದಿನವನ್ನು (Reserve Day) ಇರಿಸಲಾಗಿದೆ. ಭಾರತ ಮತ್ತು ಇಂಗ್ಲೆಂಡ್ ಪಂದ್ಯ ಮಾರ್ಚ್ 5 ರಂದು ನಡೆಯಲಿದೆ. ಒಂದು ವೇಳೆ ಅಂದು ಮಳೆಯಿಂದಾಗಿ ಪಂದ್ಯ ಪೂರ್ಣಗೊಳ್ಳದಿದ್ದರೆ, ಪಂದ್ಯವನ್ನು ಮರುದಿನ ಅಂದರೆ ಮಾರ್ಚ್ 6 ರಂದು ಮುಂದುವರಿಸಲಾಗುತ್ತದೆ. ಪಂದ್ಯದ ಫಲಿತಾಂಶಕ್ಕಾಗಿ ಮೊದಲ ದಿನ 90 ನಿಮಿಷ ಹಾಗೂ ಮೀಸಲು ದಿನದಂದು 120 ನಿಮಿಷಗಳ ಹೆಚ್ಚುವರಿ ಸಮಯವನ್ನು ನಿಗದಿಪಡಿಸಲಾಗಿದೆ. ಇದನ್ನೂ ಓದಿ: ಪಂಜಾಬಿ ಮೂಲದ ಯೂಟ್ಯೂಬರ್​ನ ಪ್ರಾಣ ತೆಗೆದ ದುಷ್ಟರು..

 ಕೆನಡಾದಲ್ಲಿ ಭಾರೀ ಸಂಚಲನ ಪಂದ್ಯದ ಫಲಿತಾಂಶಕ್ಕೆ ಎಷ್ಟು ಓವರ್‌ಗಳು ಅಗತ್ಯ? ಸಾಮಾನ್ಯವಾಗಿ ಟಿ20 ಪಂದ್ಯದ ಫಲಿತಾಂಶ ಬರಲು ಎರಡೂ ತಂಡಗಳು ಕನಿಷ್ಠ 5-5 ಓವರ್‌ಗಳನ್ನು ಆಡಿರಬೇಕು. ಆದರೆ ಸೆಮಿಫೈನಲ್‌ನಂತಹ ಪ್ರಮುಖ ಪಂದ್ಯಗಳಲ್ಲಿ ನಿಯಮ ಭಿನ್ನವಾಗಿದೆ. ಇಲ್ಲಿ ಪಂದ್ಯದ ಅಧಿಕೃತ ಫಲಿತಾಂಶ ಹೊರಬರಬೇಕಾದರೆ ಎರಡೂ ತಂಡಗಳು ಕನಿಷ್ಠ 10-10 ಓವರ್‌ಗಳನ್ನು ಆಡುವುದು ಕಡ್ಡಾಯ. ಮಳೆಯಿಂದಾಗಿ 10 ಓವರ್‌ಗಳ ಆಟವೂ ಸಾಧ್ಯವಾಗದಿದ್ದರೆ ಮಾತ್ರ ಬೇರೆ ನಿಯಮಗಳನ್ನು ಅನ್ವಯಿಸಲಾಗುತ್ತದೆ. ಒಂದು ವೇಳೆ ಪಂದ್ಯದ ದಿನ ಮತ್ತು ಮೀಸಲು ದಿನದಂದೂ ಮಳೆ ಬಿಡದೆ ಸುರಿದು, ಒಂದು ಎಸೆತವೂ ಎಸೆಯಲು ಸಾಧ್ಯವಾಗದಿದ್ದರೆ, ಫೈನಲಿಸ್ಟ್ ಅನ್ನು ನಿರ್ಧರಿಸಲು ಸೂಪರ್ ಓವರ್ ಬಳಸಲಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಸೂಪರ್-8 ಹಂತದ ಶ್ರೇಯಾಂಕವನ್ನು (Rankings) ಪರಿಗಣಿಸಲಾಗುತ್ತದೆ.

Source : News First

1 hour ago

Home Flash News