ಅಯತೊಲ್ಲಾ ಖಮೇನಿಗೆ ತನ್ನ ಮಗ ಮೊಜ್ತಬಾ ಉತ್ತರಾಧಿಕಾರಿಯಾಗುವುದು ಇಷ್ಟವಿರಲಿಲ್ಲ
ಅಯತೊಲ್ಲಾ ಖಮೇನಿಯವರ ಮಗ ಮೊಜ್ತಬಾ ಉತ್ತರಾಧಿಕಾರಿಯಾಗಿದ್ದಾರೆ. ಆದರೆ, ಖಮೇನಿ ತಮ್ಮ ಮಗ ಉತ್ತರಾಧಿಕಾರಿಯಾಗುವುದನ್ನು ಎಂದಿಗೂ ಬಯಸಿರಲಿಲ್ಲ. ಇರಾನ್ ರಾಜವಂಶ ಆಡಳಿತಕ್ಕೆ ಮರಳಿದೆ ಎಂಬ ಸಂದೇಶ ಜಗತ್ತಿಗೆ ಹೋಗುವುದು ಅವರಿಗೆ ಇಷ್ಟವಿರಲಿಲ್ಲ. 1979ರ ಇಸ್ಲಾಮಿಕ್ ಕ್ರಾಂತಿಯ ಗುರಿ ರಾಜಪ್ರಭುತ್ವವನ್ನು ಅಂತ್ಯಗೊಳಿಸುವುದಾಗಿತ್ತು. ಮೊಜ್ತಬಾ ಐಆರ್‌ಜಿಸಿ ಜೊತೆ ಆಳವಾದ ಸಂಬಂಧ ಹೊಂದಿದ್ದರು. ಟೆಹ್ರಾನ್, ಮಾರ್ಚ್ 11: ಇರಾನ್(Iran) ಸರ್ವೋಚ್ಚ ನಾಯಕರಾಗಿದ್ದ ಅಯತೊಲ್ಲಾ ಅಲಿ ಖಮೇನಿಯವರ ಹತ್ಯೆಯ ನಂತರಅವರ ಮಗ ಮೊಜ್ತಬಾ ಖಮೇನಿ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ.
ಖಮೇನಿಗೆ ತಮ್ಮ ಮಗ ತನ್ನ ಉತ್ತರಾಧಿಕಾರಿಯಾಗಬೇಕೆಂದು ಎಂದಿಗೂ ಬಯಸಿರಲಿಲ್ಲ. ಖಮೇನಿ ತಮ್ಮ ಜೀವಿತಾವಧಿಯಲ್ಲಿ ಹಲವಾರು ಬಾರಿ ವಿಶೇಷ ಸಭೆಯಲ್ಲಿ ಇದರ ಬಗ್ಗೆ ಮಾತನಾಡಿದ್ದರು. ಇದರ ಹಿಂದಿನ ಕಾರಣ ದಾಳಿಯ ಭಯ ಅಥವಾ ಅವರ ಮಗನ ಜೀವ ಹೋಗುತ್ತೆ ಎಂಬುದಲ್ಲ ಬೇರೆಯದೇ ಕಾರಣ ಇದೆ. ಇರಾನ್ ವೈರ್ ವರದಿವರದಿಗಳ ಪ್ರಕಾರ, ಇರಾನ್‌ನ ತಜ್ಞರ ಸಭೆಯ ಹಿರಿಯ ಸದಸ್ಯ ಮಹಮೂದ್ ಮೊಹಮ್ಮದಿ ಇರಾಕಿ, ILNA ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಖಮೇನಿಯವರ ವಿರೋಧದ ಹಿಂದಿನ ನಿಜವಾದ ಕಾರಣವೆಂದರೆ ಅವರು ರಾಜವಂಶಸ್ಥರು ಎಂದು ಹಣೆಪಟ್ಟಿ ಕಟ್ಟಿಕೊಳ್ಳುವುದನ್ನು ಬಯಸಿರಲಿಲ್ಲ.
ಅವರು ತಮ್ಮ ಮಗನಿಗೆ ಸಿಂಹಾಸನವನ್ನು ಹಸ್ತಾಂತರಿಸಿದ್ದಾರೆಂದು ಜನರು ಹೇಳಿಕೊಳ್ಳುವುದು ಇಷ್ಟವಿರಲಿಲ್ಲ. 1979 ರ ಇರಾನ್‌ನಲ್ಲಿ ನಡೆದ ಇಸ್ಲಾಮಿಕ್ ಕ್ರಾಂತಿಯು ರಾಜಪ್ರಭುತ್ವವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿತ್ತು. ತಮ್ಮ ಮಗ ತನ್ನ ಉತ್ತರಾಧಿಕಾರಿಯಾದರೆ, ಇರಾನ್ ಆನುವಂಶಿಕ ನಾಯಕತ್ವ ವ್ಯವಸ್ಥೆಗೆ, ಅಂದರೆ ರಾಜರು ಮತ್ತು ರಾಜಕುಮಾರರ ವ್ಯವಸ್ಥೆಗೆ ಮರಳಿದೆ ಎಂಬ ಸಂದೇಶವನ್ನು ಜಗತ್ತಿಗೆ ಮತ್ತು ಇರಾನಿನ ಜನರಿಗೆ ಕಳುಹಿಸುತ್ತದೆ ಎಂದು ಖಮೇನಿ ನಂಬಿದ್ದರು. 2009 ಕ್ಕಿಂತ ಮೊದಲು ಅವರು ಅಧಿಕೃತವಾಗಿ ಯಾವುದೇ ಸರ್ಕಾರಿ ಹುದ್ದೆಯನ್ನು ಹೊಂದಿರಲಿಲ್ಲ.