Pakistan Afghanistan War: ಈಗ ಮಾತಲ್ಲ, ಕೇವಲ ಸೇಡು: ದೊಡ್ಡ ಪ್ರತಿಜ್ಞೆ ಮಾಡಿದ ತಾಲಿಬಾನ್, ಪಾಕಿಸ್ತಾನಕ್ಕೆ ತಕ್ಕ ಉತ್ತರ!?
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಉದ್ವಿಗ್ನತೆ ಮುಂದುವರೆದಿದೆ. ಕಾಬೂಲ್‌ನ ಪ್ರಮುಖ ಮಾದಕ ವ್ಯಸನ ಮುಕ್ತ ಆಸ್ಪತ್ರೆಯ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ 400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ನಂತರ ಇದೀಗ ತಾಲಿಬಾರ್ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕಲಿಸಲು ಮುಂದಾಗಿದೆ. ಪಾಕಿಸ್ತಾನದ (Pakistan) ಇತ್ತೀಚಿನ ವಾಯುದಾಳಿಗಳನ್ನು ಅಫ್ಘಾನ್ ತಾಲಿಬಾನ್ ಸರ್ಕಾರ (Taliban Government) ತೀವ್ರವಾಗಿ ಖಂಡಿಸಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಉದ್ವಿಗ್ನತೆ ಮತ್ತೊಂದು ಹಂತಕ್ಕೆ ಕಾಲಿಟ್ಟಿದ್ದು, ಕಾಬೂಲ್‌ನ (Kabul) ಪ್ರಮುಖ ಮಾದಕ ವ್ಯಸನ ಮುಕ್ತ ಆಸ್ಪತ್ರೆಯ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ 400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಮತ್ತು ಕನಿಷ್ಠ 250 ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಅಧಿಕಾರಿಗಳು ಮತ್ತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ನಂತರ ತಾಲಿಬಾನ್ ಸರ್ಕಾರ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಿದೆ. ಕಾಬೂಲ್‌ನಲ್ಲಿರುವ ಮಾದಕವಸ್ತು ಪುನರ್ವಸತಿ ಆಸ್ಪತ್ರೆಯ ಮೇಲೆ ನಡೆದ ದಾಳಿಯಲ್ಲಿ ಸುಮಾರು 400 ಜನರು ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಹೇಳಿದೆ. ಈ ಘಟನೆಯನ್ನು ‘ಮಾನವೀಯ ತತ್ವಗಳ ಉಲ್ಲಂಘನೆ’ ಎಂದು ಕರೆದು, ಪಾಕಿಸ್ತಾನ ನಾಗರಿಕರ ಮೇಲೆ ಉದ್ದೇಶಪೂರ್ವಕ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದೆ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದ ತಾಲಿಬಾನ್!
ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ತೀವ್ರವಾಗಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ.
‘ಪಾಕಿಸ್ತಾನಿ ಸೇನೆಯು ನಾಗರಿಕರಲ್ಲಿ ಭಯೋತ್ಪಾದನೆ ಮತ್ತು ಭಯಾನಕತೆಯನ್ನು ಉಂಟುಮಾಡಲು ಆಸ್ಪತ್ರೆಗಳು, ಶಾಲೆಗಳು ಮತ್ತು ಮದರಸಾಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದೆ. ಇದು ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಗಳಂತೆಯೇ ಕಾಣುತ್ತಿದೆ’ ಎಂದಿದ್ದಾರೆ. ಅಲ್ಲದೇ ಇನ್ನೂ ಮುಂದುವರಿಸಿ, ‘ಇವು ಪ್ರತ್ಯೇಕ ದಾಳಿಗಳಲ್ಲ, ನಿರಂತರ ಆಕ್ರಮಣದ ಭಾಗವಾಗಿದೆ. ಪಾಕಿಸ್ತಾನ ಅಫ್ಘಾನ್ ವಾಯುಪ್ರದೇಶವನ್ನು ನಿರಂತರವಾಗಿ ಉಲ್ಲಂಘಿಸುತ್ತಿದೆ’ ಎಂದು ಆರೋಪಿಸಿದ್ದಾರೆ. ಈ ದಾಳಿಯು ಇತ್ತೀಚಿನ ತಿಂಗಳುಗಳಲ್ಲಿ ನಡೆದ ಅತ್ಯಂತ ಭೀಕರ ಘಟನೆ ಎಂದು ತಾಲಿಬಾನ್ ಹೇಳಿದೆ.