... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಹಡಗುಗಳ ರಕ್ಷಣೆ-ನಮಗೆ ಯಾವ ದೇಶದ ನೆರವಿನ ಅಗತ್ಯವಿಲ್ಲ:

Iran War: ಹಡಗುಗಳ ರಕ್ಷಣೆ-ನಮಗೆ ಯಾವ ದೇಶದ ನೆರವಿನ ಅಗತ್ಯವಿಲ್ಲ: ಟ್ರಂಪ್‌ ಕಿಡಿ

ವಾಷಿಂಗ್ಟನ್:‌ ಇರಾನ್‌ ಹಿಡಿತದಲ್ಲಿರುವ ಹೊರ್ಮುಜ್‌ ಜಲಸಂಧಿಯಲ್ಲಿ ಹಾದು ಹೋಗುವ ವಾಣಿಜ್ಯ ಹಡಗುಗಳ ಭದ್ರತೆಗಾಗಿ ಜಂಟಿ ಪಡೆ ನಿಯೋಜನೆ ಮಾಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಬೇಡಿಕೆಗೆ ಮಿತ್ರ ದೇಶಗಳು ನಿರಾಕರಿಸಿದ ಬೆನ್ನಲ್ಲೇ, ಜಲಮಾರ್ಗವನ್ನು ಸುಗಮಗೊಳಿಸುವ ವಿಚಾರದಲ್ಲಿ ನಮಗೆ ಯಾವುದೇ ದೇಶದ ನೆರವು ಬೇಕಾಗಿಲ್ಲ ಎಂದು ಟ್ರಂಪ್‌ ಗುಡುಗಿದ್ದಾರೆ. ಇಸ್ರೇಲ್‌ ದಾಳಿಯ ನಂತರ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತಲೆದೋರಿದ ಬಳಿಕ ಇರಾನ್‌ ತೈಲ ಸಾಗಣೆಯ ಪ್ರಮುಖ ಜಲಮಾರ್ಗವಾದ ಹೊರ್ಮುಜ್‌ ಜಲಸಂಧಿಯನ್ನು ಬಂದ್‌ ಮಾಡಿದ ಪರಿಣಾಮ ಜಾಗತಿಕವಾಗಿ ತೈಲ ಸಾಗಾಟಕ್ಕೆ ಸಮಸ್ಯೆ ಉಂಟಾಗಿದ್ದು, ಕಚ್ಛಾ ತೈಲ ಬೆಲೆ ಕೂಡಾ ಹೆಚ್ಚಳವಾಗಲು ಕಾರಣವಾಗಿತ್ತು.

 “ನಮಗೆ ಯಾರ ಅಗತ್ಯವೂ ಇಲ್ಲ, ನಮ್ಮದು ಇಡೀ ಜಗತ್ತಿನಲ್ಲೇ ಬಲಾಢ್ಯ ದೇಶವಾಗಿದೆ. ವಿಶ್ವದಲ್ಲೇ ನಮ್ಮದು ಬಲಿಷ್ಠವಾದ ಸೇನಾಬಲವನ್ನು ಹೊಂದಿರುವುದಾಗಿ” ಟ್ರಂಪ್‌ ತಿಳಿಸಿದ್ದು, ಹೊರ್ಮುಜ್‌ ಜಲಸಂಧಿಯಲ್ಲಿ ಜಂಟಿ ಪಡೆ ನಿಯೋಜಿಸುವ ಪ್ರಸ್ತಾಪಕ್ಕೆ ನೆರವು ನೀಡದ ನ್ಯಾಟೋ ದೇಶಗಳ ವಿರುದ್ಧ ಟ್ರಂಪ್‌ ಕಿಡಿಕಾರಿರುವುದಾಗಿ ವರದಿ ತಿಳಿಸಿದೆ.  ಹೊರ್ಮುಜ್‌ ಜಲಸಂಧಿಯಲ್ಲಿ ತೈಲ ಸಾಗಾಟ ಮಾಡುವ ಹಡಗುಗಳಿಗೆ ಭದ್ರತೆ ನೀಡಲು ಮಿತ್ರ ದೇಶಗಳು ಯುದ್ಧ ನೌಕೆಗಳನ್ನು ನಿಯೋಜಿಸುವಂತೆ ಡೊನಾಲ್ಡ್‌ ಟ್ರಂಪ್‌ ಮನವಿ ಮಾಡಿಕೊಂಡಿದ್ದರು. ಆದರೆ ಆಸ್ಟ್ರೇಲಿಯಾ, ಜಪಾನ್‌, ಜರ್ಮಿನಿ, ಸ್ಪೇನ್‌, ಇಟಲಿ ಟ್ರಂಪ್‌ ಅವರ ಮನವಿಯನ್ನು ತಿರಸ್ಕರಿಸಿತ್ತು.

 "ಕೆಲವು ಸಂದರ್ಭಗಳಲ್ಲಿ ನಾನು ಮಿತ್ರ ದೇಶಗಳನ್ನು ಪರೀಕ್ಷಿಸುತ್ತೇನೆ, ನಮಗೆ ಅದರ ಅಗತ್ಯವಿರುವುದಿಲ್ಲ, ಆದರೆ ಅವು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಕಂಡುಹಿಡಿಯಲು ನಾನು ಬಯಸುತ್ತೇನೆ. ಏಕೆಂದರೆ ನಾವು ಎಂದಾದರೂ ಅವುಗಳನ್ನು ಬಯಸಿದರೆ, ಆ ದೇಶಗಳು ಹೇಗೆ ಸ್ಪಂದಿಸುತ್ತವೆ ಎಂಬುದು ಈಗ ಬಹಿರಂಗವಾಗಿದೆ" ಎಂದು ಟ್ರಂಪ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಮೆರಿಕ ಬಹಳಷ್ಟು ಹಣವನ್ನು ಖರ್ಚು ಮಾಡುವ ಮೂಲಕ ಮಿತ್ರರಾಷ್ಟ್ರಗಳನ್ನು ಭದ್ರಪಡಿಸುತ್ತಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.

Source : Udayavani

1 hour ago

Home Flash News