... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ಬಿಹಾರ ರಾಜ್ಯಸಭೆ ಚುನಾವಣೆ: ಮತದಾನಕ್ಕೆ RJD,

ಬಿಹಾರ ರಾಜ್ಯಸಭೆ ಚುನಾವಣೆ: ಮತದಾನಕ್ಕೆ RJD, ‘ಕೈ‘ ಶಾಸಕರು ಗೈರು; NDAಗೆ ಗೆಲುವು

ನವದೆಹಲಿ: ಬಿಹಾರದಲ್ಲಿ ಗೆಲ್ಲ ಬಹುದಾಗಿದ್ದ ಒಂದು ರಾಜ್ಯಸಭೆ ಸ್ಥಾನವನ್ನು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಕಳೆದುಕೊಂಡಿದ್ದು, ಎಲ್ಲಾ ಐದು ಸ್ಥಾನಗಳನ್ನು ಎನ್‌ಡಿಎ ಮೈತ್ರಿಕೂಟ ಗೆದ್ದುಕೊಂಡಿದೆ. ಕಾಂಗ್ರೆಸ್‌ನ ಮೂವರು ಶಾಸಕರು ಹಾಗೂ ಆರ್‌ಜೆಡಿಯ ಶಾಸಕರೊಬ್ಬರು ಮತದಾನಕ್ಕೆ ಗೈರು ಹಾಜರಾಗಿದ್ದರಿಂದ ಎನ್‌ಡಿಎಗೆ ಗೆಲುವು ಲಭಿಸಿದೆ. ಈ ಬೆಳವಣಿಗೆಯಿಂದ ಆರ್‌ಜೆಡಿ ಕಾರ್ಯಕರ್ತರು ಅಸಮಾಧಾನಗೊಂಡಿದ್ದು, ಸೋಲಿಗೆ ಕಾಂಗ್ರೆಸ್‌ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ.

 ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವೀನ್‌, ಕೇಂದ್ರ ಸಚಿವ ಮತ್ತು ಜೆಡಿಯು ನಾಯಕ ರಾಮನಾಥ್ ಠಾಕೂರ್‌, ಕೇಂದ್ರದ ಮಾಜಿ ಸಚಿವ ಉಪೇಂದ್ರ ಕುಶ್ವಾಹ ಅವರ ಗೆಲುವು ಖಚಿತವಾಗಿತ್ತು. ಐದನೇ ಸ್ಥಾನಕ್ಕಾಗಿ ಬಿಜೆಪಿ ನಾಯಕ ಶಿವೇಶ್‌ ಕುಮಾರ್‌ ಮತ್ತು ಆರ್‌ಜೆಡಿ ಅಭ್ಯರ್ಥಿ ಎ.ಡಿ.ಸಿಂಗ್ ನಡುವೆ ಸ್ಪರ್ಧೆ ನಡೆದಿತ್ತು. ಮೊದಲ ಪ್ರಾಶಸ್ತ್ಯದ 30 ಮತಗಳನ್ನು ಪಡೆದ ಎನ್‌ಡಿಎ ಐದನೇ ಅಭ್ಯರ್ಥಿ ಶಿವೇಶ್‌ ಕುಮಾರ್‌ ಅವರು ಎರಡನೇ ಪ್ರಾಶಸ್ತ್ಯದ ಮತಗಳ ನೆರವಿನಿಂದ ಆರ್‌ಜೆಡಿಯ ಎ.ಸಿ.ಸಿಂಗ್‌ ಅವರನ್ನು ಸೋಲಿಸಿದರು. 

ಈ ಮೂಲಕ ಎನ್‌ಡಿಎ ಐದು ಸ್ಥಾನಗಳನ್ನು ಗೆದ್ದುಕೊಂಡಿತು. ಎನ್‌ಡಿಎ ಐದನೇ ಅಭ್ಯರ್ಥಿ ಕೂಡ ಗೆಲುವು ದಾಖಲಿಸಲಿದ್ದಾರೆ ಎಂದು ಎನ್‌ಡಿಎ ಈ ಹಿಂದೆ ವಿಶ್ವಾಸ ವ್ಯಕ್ತಪಡಿಸಿತ್ತು.‘ಮಹಾಘಟಬಂಧನ್‌’ನ ನಾಲ್ವರು ಶಾಸಕರು (ಕಾಂಗ್ರೆಸ್‌ನ ಮೂವರು, ಆರ್‌ಜೆಡಿಯ ಒಬ್ಬರು) ಮತದಾನದಿಂದ ದೂರ ಉಳಿದದ್ದು ,ಎನ್‌ಡಿಎಯ ಐದನೇ ಅಭ್ಯರ್ಥಿಯ ಗೆಲುವನ್ನು ಸುಲಭವಾಗಿಸಿತು. ಅಸಾದುದ್ದೀನ್‌ ಓವೈಸಿ ಅವರ ಎಐಎಂಐಎಂ ಮತ್ತು ಬಿಎಸ್‌ಪಿ ಬೆಂಬಲ ನೀಡಿದ್ದರೂ  ಮಹಾಘಟಬಂಧನ್‌ ಅಗತ್ಯವಿರುವ 41 ಶಾಸಕರನ್ನು ಒಟ್ಟುಗೂಡಿಸುವಲ್ಲಿ ವಿಫಲವಾಯಿತು.

Source : Prajavani

1 hour ago

Home Flash News