3 ರಾಜ್ಯಗಳ ವಿಧಾನಸಭೆ ಚುನಾವಣೆ: ಗಣ್ಯರಿಂದ ಬೆಳ್ಳಂಬೆಳಗ್ಗೆ ಮತದಾನ
ನವದೆಹಲಿ: ಪಂಚ ರಾಜ್ಯ ವಿಧಾನಸಭೆವಣೆಗಳ ಪೈಕಿ ಅಸ್ಸಾಂ, ಕೇರಳ ಹಾಗೂ ಪುದುಚೇರಿ ವಿಧಾನಸಭೆಗಳಿಗೆ ಗುರುವಾರ ಮತದಾನ ನಡೆಯುತ್ತಿದೆ. ಕೇರಳದಲ್ಲಿ ಸಿನಿ ರಂಗದ ಗಣ್ಯರು ಸೇರಿ ಪ್ರಮುಖರು ಬೆಳ್ಳಂಬೆಳಗ್ಗೆ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದ್ದಾರೆ.
ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಮತದಾನ ಪ್ರಾರಂಭವಾಗುತ್ತಿದ್ದಂತೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೊರಬಂದು ಹಕ್ಕು ಚಲಾಯಿಸಲು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಣ್ಣೂರಿನ ಪಿಣರಾಯಿ ಆರ್‌ಸಿ ಅಮಲ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು.ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಕೆ.ಸಿ. ವೇಣುಗೋಪಾಲ್ ಅವರು ಅಂಬಲಪುಳದಲ್ಲಿರುವ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಪುದುಚೇರಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ವಿ. ನಾರಾಯಣಸ್ವಾಮಿ ಅವರು ವಿಒಸಿ ಸರ್ಕಾರಿ ಶಾಲೆಯ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದರು.
ಕೇಂದ್ರ ಸಚಿವ ಸುರೇಶ್ ಗೋಪಿ ಗುರುವಾಯೂರು ದಕ್ಷಿಣದ ಬೂತ್ ಸಂಖ್ಯೆ 137 ರಲ್ಲಿರುವ ಗುರುವಾಯೂರು ದೇವಸ್ವಂ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಮತ ಚಲಾಯಿಸಿದರು.
ತಿರುವನಂತಪುರದ ಮುದವನ್ಮುಗಲ್‌ನಲ್ಲಿರುವ ಮತಗಟ್ಟೆಗೆ ಮತ ಚಲಾಯಿಸಲು ಸಚಿವ ಮತ್ತು ನೇಮಮ್‌ನ ಎಲ್‌ಡಿಎಫ್ ಅಭ್ಯರ್ಥಿ ವಿ. ಶಿವನ್‌ಕುಟ್ಟಿ ಮತ್ತು ನಟ ಮೋಹನ್ ಲಾಲ್ ಏಕಕಾಲದಲ್ಲಿ ಆಗಮಿಸಿದ್ದು ಮಾಧ್ಯಮಗಳ ಗಮನ ಸೆಳೆಯಿತು.
ಕೇರಳದ ಬಿಜೆಪಿ ಅಧ್ಯಕ್ಷರಾಜೀವ್ ಚಂದ್ರಶೇಖರ್ ತಿರುವನಂತಪುರದಲ್ಲಿ ಮತ ಚಲಾಯಿಸಿದರು. ತಿರುವನಂತಪುರಂನಲ್ಲಿ ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ಕಜಕೂಟಂ ಅಭ್ಯರ್ಥಿ ವಿ ಮುರಳೀಧರನ್ ಮತ ಚಲಾಯಿಸಿದರು.
ಪುದುಚೇರಿ ಬಿಜೆಪಿ ಅಧ್ಯಕ್ಷ ಮತ್ತು ರಾಜಭವನ ಕ್ಷೇತ್ರದ ಅಭ್ಯರ್ಥಿ ವಿ.ಪಿ. ರಾಮಲಿಂಗಂ ಅವರುಹೆರಿಟೇಜ್ ಟೌನ್‌ನಲ್ಲಿ ಮತ ಚಲಾಯಿಸಿದರು.
ಎರ್ನಾಕುಲಂನ ಕೊಚ್ಚಿಯಲ್ಲಿರುವ ಮತದಾನ ಕೇಂದ್ರದಲ್ಲಿ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಮತ ಚಲಾಯಿಸಿದರು.
ಬಿಜೆಪಿ, ಕಾಂಗ್ರೆಸ್, ಎಡಪಕ್ಷಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಘಟಾನುಘಟಿಗಳು ತಮ್ಮ ತಮ್ಮ ಪಕ್ಷದ ಗೆಲುವಿಗಾಗಿ ಭರ್ಜರಿ ಮತ ಬೇಟೆ ನಡೆಸಿದ್ದು, ಗುರುವಾರ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಅಸ್ಸಾಂ, ಕೇರಳ ಹಾಗೂ ಪುದುಚೇರಿ ರಾಜ್ಯಗಳಲ್ಲಿ ಒಟ್ಟಾರೆ 296 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು,ಒಟ್ಟು 1849 ಅಭ್ಯರ್ಥಿಗಳು ಕಣದಲ್ಲಿದ್ದು, 5.30 ಕೋಟಿ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಮೇ 4ಕ್ಕೆ ಫಲಿತಾಂಶ ಹೊರಬೀಳಲಿದೆ.