... SMACY
Home Flash News {"Tamil Nadu":"Ariyalur,Chengalpattu,Chennai,Coimbatore,Cuddalore,Dharmapuri,Dindigul,Erode,Kallakurichi,Kanchipuram,Kanyakumari,Karur,Krishnagiri,Madurai,Mayiladuthurai,Nagapattinam,Nilgiris,Namakkal,Perambalur,Pudukkottai,Ramanathapuram,Ranipet,Salem,Sivaganga,Tenkasi,Tirupur,Tiruchirappalli,Theni,Tirunelveli,Thanjavur,Thoothukudi,Tirupattur,Tiruvallur,Tiruvarur,Tiruvannamalai,Vellore,Viluppuram,Virudhunagar","Kerala ":"Alappuzha,Ernakulam,Idukki,Kannur,Kasargod,Kollam,Kottayam,Kozhikode,Malappuram,Palakkad,Pathanamthitta,Thiruvananthapuram,Thrissur,Wayanad ","Pondichery":"Karaikal,Mahe,Puduchery,Yanam","Karnataka":"Bagalkot,Ballari,Belagavi,BengaluruRural,BengaluruUrban,Bidar,Chamarajanagar,Chikkaballapur,Chikkamagaluru,Chitradurga,DakshinaKannada,Davanagere,Dharwad,Gadag,Hassan,Haveri,Kalaburagi,Kodagu,Kolar,Koppal,Mandya,Mysuru,Raichur,Ramanagara,Shivamogga,Tumakuru,Udupi,UttaraKannada,Vijayanagara,Vijayapura,Yadgir","Andhra Pradesh":"AlluriSitharamaRaju,Anakapalli,Ananthapuram,Annamayya,Bapatla,Chittoor,EastGodavari,Eluru,Guntur,Kakinada,KonaSeema,Krishna,Kurnool,Manyam,Nandyal,NTR,Palnadu,Prakasam,SPSNellore,SriSatyasai,Thirupathi,Srikakulam,Vishakhapatnam,Vizianagaram,WestGodavari,YSRKadapa","Telangana":"Adilabad,BhadradriKothagudem,Hanumakonda,Hyderabad,Jagtial,Jangaon,JayashankarBhupalpally,JogulambaGadwal,Kamareddy,Karimnagar,Khammam,KumuramBheemAsifabad,Mahabubabad,Mahabubnagar,Mancherial,Medak,MedchalMalkajgiri,Mulugu,Nagarkurnool,Nalgonda,Narayanpet,Nirmal,Nizamabad,Peddapalli,RajannaSircilla,Rangareddy,Sangareddy,Siddipet,Suryapet,Vikarabad,Wanaparthy,Warangal,YadadriBhuvanagiri"} Login
ನ್ಯೂಕ್ಲಿಯರ್ ಕ್ರಿಟಿಕಾಲಿಟಿ:

ನ್ಯೂಕ್ಲಿಯರ್ ಕ್ರಿಟಿಕಾಲಿಟಿ: ಪರಮಾಣು ಕ್ಷೇತ್ರದಲ್ಲಿ ರಷ್ಯಾ ನಂತರ ಭಾರತದ ಸಾಧನೆ

ನವದೆಹಲಿ: ಪರಮಾಣು ಕ್ಷೇತ್ರದಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ತಮಿಳುನಾಡಿನ ಕಲ್ಪಕ್ಕಂನಲ್ಲಿರುವ 500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ‘ಫಾಸ್ಟ್ ಬ್ರೀಡರ್ ರಿಯಾಕ್ಟರ್’ ಯಶಸ್ವಿಯಾಗಿ ‘ಕ್ರಿಟಿಕಾಲಿಟಿ’ ಹಂತ ತಲುಪಿದೆ. ಕ್ರಿಟಿಕಾಲಿಟಿ ಎಂದರೆ ಪರಮಾಣು ರಿಯಾಕ್ಟರ್‌ನಲ್ಲಿ ಪರಮಾಣು ವಿದಳನ ಕ್ರಿಯೆಯು ಯಾವುದೇ ಹೊರಗಿನ ಹಸ್ತಕ್ಷೇಪವಿಲ್ಲದೆ ತಾನಾಗಿಯೇ ನಿರಂತರವಾಗಿ ನಡೆಯುವ ಹಂತಕ್ಕೆ ತಲುಪುವುದು. ಇದು ರಿಯಾಕ್ಟರ್ ಪೂರ್ಣ ಪ್ರಮಾಣದ ಕಾರ್ಯಾಚರಣೆಗೆ ಸಿದ್ಧವಾಗುವ ಮೊದಲ ಪ್ರಮುಖ ಹೆಜ್ಜೆಯಾಗಿದೆ. 1954ರಲ್ಲಿ ಡಾ.ಹೋಮಿ ಜಹಾಂಗೀರ್ ಭಾಭಾ ಅವರು ರೂಪಿಸಿದ್ದ ಭಾರತದ ಮೂರು ಹಂತದ ಪರಮಾಣು ಯೋಜನೆಯಲ್ಲಿ ಈಗ ಭಾರತ ಎರಡನೇ ಹಂತದಲ್ಲಿ ಯಶಸ್ವಿಯಾಗಿದೆ. ಭಾರತದಲ್ಲಿ ವಿಶ್ವದ ಶೇ 25ರಷ್ಟು ಥೋರಿಯಂ ನಿಕ್ಷೇಪಗಳಿವೆ. ಈ ಎರಡನೇ ಹಂತದ ಯಶಸ್ಸು, ಭವಿಷ್ಯದಲ್ಲಿ ಥೋರಿಯಂ ಬಳಸಿ ಮೂರನೇ ಹಂತದ ಪರಮಾಣು ವಿದ್ಯುತ್ ಉತ್ಪಾದನೆಗೆ ಬುನಾದಿ ಹಾಕಿಕೊಡುತ್ತದೆ. ಇದು ಭಾರತದ ಇಂಧನ ಸ್ವಾವಲಂಬನೆಗೆ ಅತ್ಯಂತ ಮುಖ್ಯವಾಗಿದೆ.

 ಈ ರಿಯಾಕ್ಟರ್‌ಗಳು ಮೊದಲ ಹಂತದ ರಿಯಾಕ್ಟರ್‌ಗಳಿಂದ ಹೊರಬರುವ ಅಪಾಯಕಾರಿ ‘ಪರಮಾಣು ತ್ಯಾಜ್ಯ’ವನ್ನು ಇಂಧನವಾಗಿ ಮರುಬಳಕೆ ಮಾಡುತ್ತವೆ. ಇದರಿಂದ ಪರಿಸರಕ್ಕೆ ಆಗುವ ಹಾನಿ ತಪ್ಪುತ್ತದೆ. ನೈಸರ್ಗಿಕ ಯುರೇನಿಯಂ ಬಳಸಿ ವಿದ್ಯುತ್ ಮತ್ತು ಪ್ಲುಟೋನಿಯಂ ಪಡೆಯುವುದು. ಇದು ಈಗಾಗಲೇ ಭಾರತದಲ್ಲಿ ಚಾಲ್ತಿಯಲ್ಲಿದೆ – ಈ ಹಂತದಲ್ಲಿ ನೈಸರ್ಗಿಕ ಯುರೇನಿಯಂ ಅನ್ನು ಇಂಧನವಾಗಿ ಬಳಸಲಾಗುತ್ತದೆ. ವಿದ್ಯುತ್ ಉತ್ಪಾದನೆಯ ಜೊತೆಗೆ, ಈ ರಿಯಾಕ್ಟರ್‌ಗಳಿಂದ ಹೊರಬರುವ ಬಳಸಿದ ಇಂಧನ ಉಪ-ಉತ್ಪನ್ನವಾಗಿ ಪ್ಲುಟೋನಿಯಂ ಅನ್ನು ನೀಡುತ್ತದೆ. ಪ್ಲುಟೋನಿಯಂ ಬಳಸಿ ಫಾಸ್ಟ್ ಬ್ರೀಡರ್ ರಿಯಾಕ್ಟರ್‌ಗಳನ್ನು ನಡೆಸುವುದು.

 ಈ ಹಂತವನ್ನು ಭಾರತ ಈಗ ಸಾಧಿಸಿದೆ– ಈ ಹಂತದಲ್ಲಿ ಫಾಸ್ಟ್ ಬ್ರೀಡರ್‌ ರಿಯಾಕ್ಟರ್‌ಗಳಿಗೆ ಪ್ಲುಟೋನಿಯಂ ಅನ್ನು ಇಂಧನವಾಗಿ ಬಳಸಲಾಗುತ್ತದೆ. ಇದು ಬಳಸಿದ್ದಕ್ಕಿಂತ ಹೆಚ್ಚು ಇಂಧನವನ್ನು ಉತ್ಪಾದಿಸುತ್ತದೆ. ಈ ರಿಯಾಕ್ಟರ್‌ಗಳಲ್ಲಿ ಥೋರಿಯಂ ಅನ್ನು ಬಳಸುವ ಮೂಲಕ ಅದನ್ನು ಯುರೇನಿಯಂ-233 ಆಗಿ ಪರಿವರ್ತಿಸಲಾಗುತ್ತದೆ. ತಮಿಳುನಾಡಿನ ಕಲ್ಪಕ್ಕಂನಲ್ಲಿರುವ ನಡೆದಿರುವುದು ಈ ಹಂತದ ಪ್ರಮುಖ ಭಾಗವಾಗಿದೆ. ಭಾರತದಲ್ಲಿ ಹೇರಳವಾಗಿರುವ ಥೋರಿಯಂ ಬಳಸಿ ಶಾಶ್ವತ ಇಂಧನ ಭದ್ರತೆ ಸಾಧಿಸುವುದು. ಇದು ಭಾರತದ ಮುಂದಿರುವ ಗುರಿಯಾಗಿದೆ– ಈ ಹಂತದಲ್ಲಿ ಭಾರತದಲ್ಲಿರುವ ಬೃಹತ್ ಥೋರಿಯಂ ನಿಕ್ಷೇಪಗಳನ್ನು ಬಳಸಲಾಗುತ್ತದೆ. ಎರಡನೇ ಹಂತದಲ್ಲಿ ತಯಾರಾದ ಯುರೇನಿಯಂ-233 ಅನ್ನು ಇಲ್ಲಿ ಇಂಧನವಾಗಿ ಬಳಸಲಾಗುತ್ತದೆ. ಇದು ಯಶಸ್ವಿಯಾದರೆ ಇಂಧನಕ್ಕಾಗಿ ಬೇರೆ ದೇಶಗಳ ಮೇಲೆ ಅವಲಂಬಿತವಾಗಬೇಕಿಲ್ಲ.

Source : Prajavani

2 hours ago

Home Flash News