ಪತ್ರಕರ್ತ, ಸಾಹಿತಿ, ಪರಿಸರವಾದಿಯೂ ಆಗಿದ್ದರು ವಿದ್ವಾಂಸ ಎಸ್.ಆರ್. ರಾಮಸ್ವಾಮಿ
ಬೆಂಗಳೂರು: ಅರಣ್ಯ ಇಲಾಖೆ ನೀತಿಗಳಿಂದ ರೈತರಿಗೆ ಭೂಮಿ ಮೇಲಿನ ಹಕ್ಕು ಕೈತಪ್ಪುವುದನ್ನು ಖಂಡಿಸಿ ಸುಮಾರು ಮೂರು ದಶಕಗಳ ಕಾಲ ಹೋರಾಡಿದವರು ಎಸ್.ಆರ್.ರಾಮಸ್ವಾಮಿ ಅವರು. ರೈತರ ಪರ ಹೋರಾಟದ ಜತೆಗೆ, ಸ್ವದೇಶಿ ಚಳವಳಿಯಲ್ಲೂ ಸಕ್ರಿಯರಾಗಿದ್ದ ಅವರು ಜತೆಜತೆಗೆ ಸಾಹಿತ್ಯ ಕೃಷಿಯನ್ನೂ ಕೈಗೊಂಡವರು. 50ಕ್ಕೂ ಹೆಚ್ಚು ಕೃತಿಗಳು ಮತ್ತು ಎರಡು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಅವರು ರಚಿಸಿದ್ದಾರೆ.
1972ರಲ್ಲಿ ಸುಧಾ ವಾರಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕರಾಗಿದ್ದ ಅವರು, ನಂತರ ಉತ್ಥಾನ ಮಾಸಿಕದಲ್ಲಿ ಮುಖ್ಯ ಸಂಪಾದಕರಾಗಿದ್ದರು.
ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷ ಹಾಗೂ ಗೋಖಲೆ ಸಾರ್ವಜನಿಕ ವ್ಯವಹಾರಗಳ ಸಂಸ್ಥೆಯ ಬೆಂಗಳೂರು ವಿಭಾಗದ ಗೌರವ ಕಾರ್ಯದರ್ಶಿಯಾಗಿಯೂ ಸಾಮಾಜಿಕ ಕಾರ್ಯಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು.
ಇದನ್ನೂ ಓದಿ:ರಾಷ್ಟ್ರೋತ್ಥಾನ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಎಸ್.ಆರ್. ರಾಮಸ್ವಾಮಿ ನಿಧನ
ಸಾಹಿತ್ಯ ಕ್ಷೇತ್ರದ ಪ್ರಮಖರಾದ ಡಿ.ವಿ.ಗುಂಡಪ್ಪ, ವಿ.ಸೀತಾರಾಮಯ್ಯ, ಎಸ್. ಶ್ರೀಕಂಠ ಶಾಸ್ತ್ರಿ, ರಲ್ಲಪಲ್ಲಿ ಅನಂತಕೃಷ್ಣ ಶರ್ಮಾ, ಯಾದವರಾವ್ ಜೋಶಿ ಮತ್ತು ಪಿ. ಕೋದಂಡ ರಾವ್ ಅವರೊಡನೆ ಡಾ. ರಾಮಸ್ವಾಮಿ ಅವರು ಉತ್ತಮ ಒಡನಾಟ ಹೊಂದಿದ್ದರು.