ಪ್ಲೂಟೋಗೆ ಮತ್ತೆ 'ಗ್ರಹ' ಪಟ್ಟ ನೀಡಿ: ನಾಸಾಗೆ 10 ವರ್ಷದ ಬಾಲಕಿಯ ಭಾವುಕ ಪತ್ರ; ಸಖತ್ ರಿಪ್ಲೈ ಕೊಟ್ಟ ಬಾಹ್ಯಾಕಾಶ ಸಂಸ್ಥೆ!
ಹತ್ತು ವರ್ಷದ ಕಾಯ್ಲಾ (Kaela) ಎಂಬ ಬಾಲಕಿ ಪ್ಲೂಟೋವನ್ನು ಮತ್ತೆ ಗ್ರಹ ಎಂದು ಘೋಷಿಸುವಂತೆ ಕೋರಿ ನಾಸಾಗೆ (NASA) ಕೈಬರಹದಲ್ಲಿ ಪತ್ರವೊಂದನ್ನು ಬರೆದಿದ್ದಾಳೆ. ಈ ಪತ್ರವು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಬಾಲಕಿಯ ಮುಗ್ಧತೆ, ಕುತೂಹಲ ಮತ್ತು ಅವಳು ನೀಡಿರುವ ಕಾರಣಗಳು ನೆಟ್ಟಿಗರ ಮನ ಗೆದ್ದಿವೆ.
ತನ್ನ ಪತ್ರದಲ್ಲಿ ಕಾಯ್ಲಾ, "ಪ್ಲೂಟೋ ನಮ್ಮ ಸೌರಮಂಡಲದ ಒಂದು ಭಾಗ ಮತ್ತು ಇದನ್ನು ಹಿಂದೆ ಗ್ರಹವೆಂದೇ ಪರಿಗಣಿಸಲಾಗುತ್ತಿತ್ತು. ಈಗ ಇದನ್ನು 'ಕುಬ್ಜ ಗ್ರಹ' (Dwarf Planet) ಎಂದು ಕರೆಯಲಾಗುತ್ತಿದ್ದರೂ, ಇದನ್ನು ನೈಜ ಗ್ರಹವೆಂದೇ ಗುರುತಿಸಬೇಕು. ಒಂದು ವೇಳೆ ಪ್ಲೂಟೋಗೆ ಮತ್ತೆ ಗ್ರಹದ ಪಟ್ಟ ನೀಡಿದರೆ ನಾನು ಮತ್ತು ನನ್ನ ಗೆಳೆಯರು ಸೇರಿದಂತೆ ಬಹಳಷ್ಟು ಜನರಿಗೆ ಸಂತೋಷವಾಗುತ್ತದೆ" ಎಂದು ಮನವಿ ಮಾಡಿದ್ದಾಳೆ.