ಮೋದಿ-ರಾಹುಲ್ ಅಪರೂಪದ ಆತ್ಮೀಯ ಮಾತುಕತೆಯಲ್ಲಿ ಪ್ರಜಾಪ್ರಭುತ್ವದ ಸೌಂದರ್ಯ ಕಂಡ ನೆಟ್ಟಿಗರು
ಮಹಾತ್ಮ ಜ್ಯೋತಿಬಾ ಫುಲೆ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮುಖಾಮುಖಿಯಾದರು. ಸದಾ ರಾಜಕೀಯ ಜಿದ್ದಾಜಿದ್ದಿಯಲ್ಲಿ ತೊಡಗಿರುವ ಈ ಇಬ್ಬರು ನಾಯಕರು, ಮಹಾನ್ ಸುಧಾರಕನಿಗೆ ಹೂಗುಚ್ಛ ಅರ್ಪಿಸುವ ವೇಳೆ ಅತ್ಯಂತ ಆತ್ಮೀಯವಾಗಿ ಮತ್ತು ಮುಕ್ತವಾಗಿ ಮಾತನಾಡಿಕೊಂಡ ಕ್ಷಣ ಎಲ್ಲರ ಗಮನ ಸೆಳೆಯಿತು. ವಿವಿಧ ಪಕ್ಷಗಳ ನಾಯಕರು ಒಗ್ಗೂಡಿ ಫುಲೆ ಅವರಿಗೆ ನಮನ ಸಲ್ಲಿಸಿದರು.
ಸದಾಕಾಲ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ರಾಹುಲ್ ಗಾಂಧಿಗೆ, ಮೋದಿ ಕೂಡ ಸಾರ್ವಜನಿಕ ವೇದಿಕೆಯಲ್ಲಿ ಸಿಗುವ ಅವಕಾಶದಲ್ಲಿ ತಿರುಗೇಟು ನೀಡುತ್ತಿದ್ದರು. ಇವರಿಬ್ಬರು ಆತ್ಮೀಯವಾಗಿ ಮಾತನಾಡುವ ವಿಡಿಯೋ ಸಿಕ್ಕಿದ್ದು ಬಹಳ ಕಡಿಮೆ. ತೀರಾ ಅಪರೂಪ ಎನ್ನುವಂತೆ ಶನಿವಾರ ಈ ಕ್ಷಣ ಸಿಕ್ಕಿದ್ದು, ಇದು ದೇಶದ ಪ್ರಜಾಪ್ರಭುತ್ವದ ಸೌಂದರ್ಯ ಎಂದು ನೆಟ್ಟಿಗರು ಮೆಚ್ಚಿದ್ದಾರೆ.