Select Location
All Locations
State
Region
City / District
ಎಎಪಿಗೆ ಬೇಡವಾದ ಚಡ್ಡಾ ಮೇಲೆ ಕೇಂದ್ರಕ್ಕೆ ಪ್ರೀತಿ: ಸಂಸದ ರಾಘವ್ ಚಡ್ಡಾಗೆ 'Z+' ಕೆಟಗರಿ ಭದ್ರತೆ ನೀಡಿದ ಕೇಂದ್ರ

ಎಎಪಿಗೆ ಬೇಡವಾದ ಚಡ್ಡಾ ಮೇಲೆ ಕೇಂದ್ರಕ್ಕೆ ಪ್ರೀತಿ: ಸಂಸದ ರಾಘವ್ ಚಡ್ಡಾಗೆ 'Z+' ಕೆಟಗರಿ ಭದ್ರತೆ ನೀಡಿದ ಕೇಂದ್ರ

ಪಂಜಾಬ್: ಎಎಪಿ ಪಕ್ಷದ ರಾಜ್ಯಸಭಾ ಸಂಸದರಾಗಿರುವ ರಾಘವ್ ಚಡ್ಡಾ ಅವರನ್ನು ಇತ್ತೀಚೆಗೆ ಎಎಪಿ ರಾಜ್ಯಸಭೆಯಲ್ಲಿ ಪಕ್ಷದ ಉಪನಾಯಕನ ಹುದ್ದೆಯಿಂದ ತೆಗೆದು ಹಾಕಿತ್ತು. ಇದಾದ ಬಳಿಕ ಪಂಜಾಬ್ ಮೂಲದ ಈ ಸಂಸದ ರಾಘವ್ ಚಡ್ಡಾ ಅವರಿಗೆ ನೀಡಿದ್ದ ಜೆಡ್ ಪ್ಲಸ್ ಭದ್ರತೆಯನ್ನು ಪಂಜಾಬ್ ಸರ್ಕಾರ ಹಿಂಪಡೆದಿತ್ತು. 37 ವರ್ಷದ ರಾಘವ್ ಚಡ್ಡಾ ಅವರ ಭದ್ರತೆಗೆ ಇದ್ದ ಪಂಜಾಬ್ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕೂಡಲೇ ಪ್ರಧಾನ ಕಚೇರಿಗೆ ವರದಿ ಮಾಡುವಂತೆ ಕೇಳಲಾಗಿತ್ತು. ಎಎಪಿ ಪಕ್ಷ ಹಾಗೂ ಸಂಸದ ರಾಘವ್ ಚಡ್ಡಾ ನಡುವೆ ಬೆಳೆಯುತ್ತಿರುವ ಭಿನ್ನಾಭಿಪ್ರಾಯದ ಮಧ್ಯೆಈ ಬೆಳವಣಿಗೆ ನಡೆದಿದೆ.

ಆದರೆ ಪಂಜಾಬ್ ಸರ್ಕಾರ ಎಎಪಿ ಸಂಸದ ರಾಘವ್ ಚಡ್ಡಾ ಅವರ ಭದ್ರತೆಯನ್ನು ವಾಪಸ್ ತೆಗೆದುಕೊಂಡ ಸ್ವಲ್ಪ ಹೊತ್ತಿನಲ್ಲೇ ಕೇಂದ್ರದ ಎನ್‌ಡಿಎ ಸರ್ಕಾರ ಎಎಪಿ ಸಂಸದ ರಾಘವ್ ಚಡ್ಡಾಗೆ ಭದ್ರತೆ ಒದಗಿಸಿದೆ. ಕೆಲ ಮೂಲಗಳ ಪ್ರಕಾರ ಕೇಂದ್ರ ಗೃಹ ಸಚಿವಾಲಯವು ಎಎಪಿ ಸಂಸದ ರಾಘವ್ ಚಡ್ಡಾ ಅವರಿಗೆ ದೆಹಲಿ ಹಾಗೂ ಪಂಜಾಬ್‌ನಲ್ಲಿ ಭದ್ರತೆ ಒದಗಿಸಲಿದೆ. ಹಾಗೆಯೇ ದೇಶಾದ್ಯಂತ ಅವರಿಗೆ ವೈ ಕೆಟಗರಿಯ ಭದ್ರತೆಯನ್ನು ನೀಡಲಾಗುತ್ತದೆ.


Asianet News 1 hour ago
Home Flash News