Select Location
All Locations
State
Region
City / District
ರಾಜ್ಯಸಭೆ ಉಪಸಭಾಪತಿ ಚುನಾವಣೆ ಬಹಿಷ್ಕರಿಸಲು ವಿಪಕ್ಷಗಳ ನಿರ್ಧಾರ: ಜೈರಾಮ್ ರಮೇಶ್

ರಾಜ್ಯಸಭೆ ಉಪಸಭಾಪತಿ ಚುನಾವಣೆ ಬಹಿಷ್ಕರಿಸಲು ವಿಪಕ್ಷಗಳ ನಿರ್ಧಾರ: ಜೈರಾಮ್ ರಮೇಶ್

ನವದೆಹಲಿ: ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಏಪ್ರಿಲ್ 17ರಂದು ನಡೆಯಲಿರುವ ಚುನಾವಣೆಯನ್ನು ಬಹಿಷ್ಕರಿಸಲು ವಿರೋಧ ಪಕ್ಷಗಳು ನಿರ್ಧರಿಸಿವೆ. ಲೋಕಸಭೆಯಲ್ಲಿ ಉಪಸಭಾಪತಿ ನೇಮಕ ಮಾಡದ ಕೇಂದ್ರ ಸರ್ಕಾರದ ಧೋರಣೆಯನ್ನು ಪ್ರತಿಭಟಿಸಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ತಿಳಿಸಿದ್ದಾರೆ. ಈ ಬಹಿಷ್ಕಾರದ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ (X) ಮಾಹಿತಿ ಹಂಚಿಕೊಂಡಿರುವ ಜೈರಾಮ್ ರಮೇಶ್, ಸರ್ಕಾರದ ನಡೆಯನ್ನು ಖಂಡಿಸಲು ಮೂರು ಮುಖ್ಯ ಕಾರಣಗಳನ್ನು ನೀಡಿದ್ದಾರೆ. ಲೋಕಸಭೆ ಉಪಸಭಾಪತಿ ಹುದ್ದೆ ಖಾಲಿ. 

ಕಳೆದ 7 ವರ್ಷಗಳಿಂದ ಲೋಕಸಭೆಯಲ್ಲಿ ಉಪಸಭಾಪತಿ ಹುದ್ದೆಯನ್ನು ಭರ್ತಿ ಮಾಡದೆ ಮೋದಿ ಸರ್ಕಾರ ಸಂಸದೀಯ ಸಂಪ್ರದಾಯವನ್ನು ಉಲ್ಲಂಘಿಸಿದೆ. ಭಾರತದ ಇತಿಹಾಸದಲ್ಲಿ ಇಷ್ಟು ಸುದೀರ್ಘ ಕಾಲ ಈ ಹುದ್ದೆ ಖಾಲಿ ಇರುವುದು ಇದೇ ಮೊದಲು ಎಂದು ಅವರು ದೂರಿದ್ದಾರೆ. ನಾಮನಿರ್ದೇಶಿತ ಸದಸ್ಯರಿಗೆ ಮಣೆ: ಉಪಸಭಾಪತಿ ಅಭ್ಯರ್ಥಿಯಾಗಿರುವ ಹರಿವಂಶ್ ನಾರಾಯಣ್ ಸಿಂಗ್ ಅವರ ಎರಡನೇ ಅವಧಿ ಏಪ್ರಿಲ್ 9ಕ್ಕೆ ಮುಕ್ತಾಯವಾಗಿತ್ತು. ಮರುದಿನವೇ ಅವರನ್ನು ರಾಷ್ಟ್ರಪತಿಗಳ ಮೂಲಕ ನಾಮನಿರ್ದೇಶಿತ ಸದಸ್ಯರನ್ನಾಗಿ ಮಾಡಲಾಗಿದೆ. ಸಂಸತ್ತಿನ ಇತಿಹಾಸದಲ್ಲಿ ರಾಷ್ಟ್ರಪತಿಗಳಿಂದ ನಾಮನಿರ್ದೇಶನಗೊಂಡ ಸದಸ್ಯರನ್ನು ಉಪಸಭಾಪತಿ ಸ್ಥಾನಕ್ಕೆ ಪರಿಗಣಿಸುತ್ತಿರುವುದು ಇದೇ ಮೊದಲು ಎಂದು ರಮೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.


Udayavani 9 hours ago
Home Flash News