IPL 2026: ಮುಂಬೈ ಇಂಡಿಯನ್ಸ್ ತಂಡ ಸೇರಿದ 21ರ ಹರೆಯದ ಪಂಜಾಬ್ ಆಲ್ ರೌಂಡರ್
ಮುಂಬೈ: ಐಪಿಎಲ್ 2026ರ ತನ್ನ ಐದನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲು ಸಜ್ಜಾಗಿರುವ ಮುಂಬೈ ಇಂಡಿಯನ್ಸ್ (Mumbai Indians) ತಂಡವು ಇದೀಗ ಪಂಜಾಬ್ ಆಲ್ ರೌಂಡರ್ ಓರ್ವನನ್ನು ತಂಡಕ್ಕೆ ಸೇರಿಸಿಕೊಂಡಿದೆ. 21 ವರ್ಷದ ಪಂಜಾಬ್ ಆಟಗಾರ ಕ್ರಿಶ್ ಭಗತ್ (Krish Bhagat) ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಗಾಯದಿಂದಾಗಿ ಐಪಿಎಲ್‌ನಿಂದ ಹೊರಗುಳಿದಿರುವ ಅಥರ್ವ ಅಂಕೋಲೇಕರ್ ಬದಲಿಗೆ ಮುಂಬೈ ಇಂಡಿಯನ್ಸ್ ಕ್ರಿಶ್ ಭಗತ್ ಅವರನ್ನು ಸೇರಿಸಿಕೊಂಡಿದೆ. ಮುಂಬೈನ ಎಡಗೈ ಸ್ಪಿನ್ ಆಲ್ ರೌಂಡರ್ ಅಥರ್ವ ಅಂಕೋಲೇಕರ್ ಭಾರತವನ್ನು ಅಂಡರ್ 19 ಹಂತದಲ್ಲಿ ಪ್ರತಿನಿಧಿಸಿದ್ದಾರೆ. ಈ ಬಾರಿಯ ಹರಾಜಿನಲ್ಲಿ ಅವರನ್ನು ಮೂಲ ಬೆಲೆ 30 ಲಕ್ಷ ರೂ ಗೆ ಮುಂಬೈ ಇಂಡಿಯನ್ಸ್ ತನ್ನದಾಗಿಸಿತ್ತು.