Mystery Deepens: ಪಾಕ್ ಉಗ್ರರ ಪಾಲಿಗೆ ಧುರಂಧರ್ ಆದ ಅಪರಿಚಿತರು! ಸಾಲು ಸಾಲು ಭಯೋತ್ಪಾದಕರನ್ನು ಸದೆ ಬಡೀತಿರೋದ್ಯಾರು?
ನವದೆಹಲಿ: ‘ಧುರಂಧರ್’ (Dhurundhar) ಚಲನಚಿತ್ರ ಪ್ರಸ್ತುತ ಭಾರತದಲ್ಲಿ ಸದ್ದು ಮಾಡುತ್ತಿದೆ. ಇದರಲ್ಲಿ, ಒಬ್ಬ ಗೂಢಚಾರಿ ಶತ್ರು ದೇಶಕ್ಕೆ ನುಸುಳಿ ಭಯೋತ್ಪಾದಕರನ್ನು ನಿರ್ಮೂಲನೆ ಮಾಡುತ್ತಾನೆ. ಈ ಕಥೆಯು ಅವಾಸ್ತವಿಕವಾಗಿದ್ದರೂ, ಇದೀಗ ಅದೇ ಚಲನಚಿತ್ರ ಚಿತ್ರಕಥೆಯನ್ನು (Mystery Deepens) ಹೋಲುವ ಸತ್ಯದ ಘಟನೆಯೊಂದು ನಡೆದಿದೆ.
ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನವು ‘ಅಪರಿಚಿತ ದಾಳಿಕೋರ’ರಿಂದ ಪ್ರಮುಖ ಭಯೋತ್ಪಾದಕ ವ್ಯಕ್ತಿಗಳ ಮೇಲಿನ ಸರಣಿ ದಾಳಿಯನ್ನು ಎದುರಿಸುತ್ತಿದೆ. ಆದರೆ ನಿಜವಾಗಿಯೂ ‘ಧುರಂಧರ್’ (ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವವನು?) ಇದ್ದಾನೆಯೇ? ಲಷ್ಕರ್-ಎ-ತೈಬಾ ಸಹ-ಸಂಸ್ಥಾಪಕ ಮತ್ತು ಭಯೋತ್ಪಾದಕ ಅಮೀರ್ ಹಮ್ಜಾ ಮೇಲೆ ಗುರುವಾರ ದಾಳಿ ನಡೆದಿದ್ದು, ಹೀಗಾಗಿ ಇಂತಹ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ಪಾಕಿಸ್ತಾನದಲ್ಲಿ ಭಯೋತ್ಪಾದಕರ ಮೇಲಿನ ನಡೆಯುವ ಸರಣಿ ಅಪರಿಚಿತ ದಾಳಿಗಳ ಪಟ್ಟಿ ಹೆಚ್ಚುತ್ತಿದ್ದು, ಇದನ್ನು ಕೇವಲ ಕಾಕತಾಳೀಯವೆಂದು ಪರಿಗಣಿಸಲು ಸಾಧ್ಯವಿಲ್ಲ. ಯಾಕೆಂದರೆ ಅಪರಿಚಿತರಿಂದ ಸಾವಿಗೊಳಗಾದ ಅನೇಕ ಪ್ರಮುಖ ಭಯೋತ್ಪಾದಕ ವ್ಯಕ್ತಿಗಳು ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನಂತಹ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದಾರೆ.
ಇದ್ದಕ್ಕಿದ್ದಂತೆ ಅವರೆಲ್ಲ ಕೊಲ್ಲಲ್ಪಟ್ಟಡುತ್ತಾರೆ ಎಂದರೆ ಏನರ್ಥ? ಲಾಹೋರ್, ಕರಾಚಿ ಮತ್ತು ಪಿಒಕೆ ಎಲ್ಲ ಕಡೆಯೂ ಒಂದೇ ರೀತಿಯ ಘಟನೆಗಳು. ಮತ್ತೊಂದೆಡೆ ಪಾಕಿಸ್ತಾನಿ ಏಜೆನ್ಸಿಗಳು ಸಹ ಇದರ ಬಗ್ಗೆ ಯಾವುದೇ ನಿರ್ದಿಷ್ಟ ಉತ್ತರಗಳನ್ನು ನೀಡಿಲ್ಲ. ಅದಕ್ಕಾಗಿಯೇ ‘ಅಪರಿಚಿತ ಬಂದೂಕುಧಾರಿಗಳು’ ಇನ್ನೂ ನಿಗೂಢವಾಗಿದ್ದಾರೆ. ಅವರ ಗುರುತುಗಳಿಗಿಂತ ಹಿಡಿದು ಅವರ ಗುರಿಗಳ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ.