Donald Trump: ಮತ್ತೆ ಸಂಧಾನದ ಬಗ್ಗೆ ಮಾತನಾಡಿದ ಟ್ರಂಪ್! ಒಪ್ಪಂದ ನಡೆದರೆ ಪಾಕಿಸ್ತಾನಕ್ಕೆ ಹೋಗೋದಾಗಿ ಹೇಳಿದ್ದೇಕೆ ಅಮೆರಿಕಾ ಅಧ್ಯಕ್ಷ?
ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ (America Iran Deal) ನಡುವೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರೆ ತಾನು ಪಾಕಿಸ್ತಾನಕ್ಕೆ ಪ್ರಯಾಣಿಸುವುದನ್ನು ಪರಿಗಣಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಗುರುವಾರ (ಸ್ಥಳೀಯ ಸಮಯ) ಹೇಳಿದ್ದಾರೆ. ಈ ಹೇಳಿಕೆ ಎರಡು ದೇಶಗಳು ಮಾತುಕತೆಗಳು ಬಹುತೇಕ ಅಂತಿಮಗೊಂಡಿವೆ ಎಂಬುದನ್ನು ಸೂಚಿಸಿದೆ. ನೆವಾಡಾದ ಲಾಸ್ ವೇಗಾಸ್‌ಗೆ ಹೋಗುವ ವೇಳೆ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳನ್ನು ಸುಗಮಗೊಳಿಸಿದ್ದಕ್ಕಾಗಿ ಪಾಕಿಸ್ತಾನವನ್ನು ಶ್ಲಾಘಿಸಿದರು ಮತ್ತು ಈ ಮಾತುಕತೆಗಳನ್ನು ರಚನಾತ್ಮಕವಾಗಿದೆ ಎಂದು ಬಣ್ಣಿಸಿದರು.
ಪಾಕಿಸ್ತಾನಿ ಮಧ್ಯವರ್ತಿಗಳು ‘ತುಂಬಾ ಒಳ್ಳೆಯವರು’ ಎಂದು ಹೇಳಿದ ಟ್ರಂಪ್, ‘ನಾನು ಪಾಕಿಸ್ತಾನಕ್ಕೆ ಹೋಗುವ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ಎರಡು ದೇಶಗಳ ನಡುವೆ ಶಾಂತಿ ಒಪ್ಪಂದಕ್ಕೆ ಇಸ್ಲಾಮಾಬಾದ್‌ನಲ್ಲಿ ಸಹಿ ಹಾಕಿದರೆ, ನಾನು ಪಾಕಿಸ್ತಾನಕ್ಕೆ ಹೋಗಬಹುದು. ಅವರು ನನ್ನ ಆಗಮನವನ್ನು ಬಯಸುತ್ತಿದ್ದಾರೆ ಎಂದು ಹೇಳಿದರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಡೊನಾಲ್ಡ್ ಟ್ರಂಪ್ ಪ್ರಕಾರ, ಅಮೆರಿಕ ಮತ್ತು ಇರಾನ್ ಮುಂದಿನ ಸುತ್ತಿನ ಮಾತುಕತೆಯನ್ನು ಬಹುಶಃ ಈ ವಾರಾಂತ್ಯದಲ್ಲಿ ನಡೆಸುವ ಸಾಧ್ಯತೆಯಿದೆ. ಒಪ್ಪಂದದ ಬಗ್ಗೆ ಅವರು ಆಶಾವಾದಿಗಳಾಗಿದ್ದರು, ಇರಾನ್ ಒಪ್ಪಂದ ಮಾಡಿಕೊಳ್ಳಲು ಬಯಸುತ್ತದೆ ಎಂದು ಡೊನಾಲ್ಡ್ ಟ್ರಂಪ್ ಒತ್ತಿ ಹೇಳಿದರು. ಅಮೆರಿಕವು ಇರಾನಿಯನ್ನರೊಂದಿಗೆ 'ತುಂಬಾ ಚೆನ್ನಾಗಿ' ವ್ಯವಹರಿಸುತ್ತಿದೆ ಎಂದು ಹೇಳಿದ ಟ್ರಂಪ್, ಆದರೆ ಕದನ ವಿರಾಮವನ್ನು ವಿಸ್ತರಿಸಬೇಕೇ ಅಥವಾ ಬೇಡವೇ ಎಂಬುದು ಅವರಿಗೆ ಖಚಿತವಿಲ್ಲ ಎಂದು ಹೇಳಿದರು.